ನ್ಯೂಯಾರ್ಕ್ :ಸೋಮವಾರ ನಡೆದ ಪಂದ್ಯದಲ್ಲಿ ಗ್ರೀಕ್ನ ಮರಿಯಾ ಸಕ್ಕರಿ ಅವರನ್ನು ಮಣಿಸಿದ 23 ಗ್ರ್ಯಾಂಡ್ ಸ್ಲಾಮ್ ಒಡತಿ ಸೆರೆನಾ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
24ನೇ ಗ್ರ್ಯಾಂಡ್ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸೆರೆನಾ ಎರಡುವರೆಗಂಟೆ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಗ್ರೀಕ್ ಆಟಗಾರ್ತಿಯನ್ನು 6-3, 6-7 ಹಾಗೂ 6-3ರ ಸೆಟ್ಗಳ ಅಂತರದಲ್ಲಿ ಬಗ್ಗುಬಡಿದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಮೊದಲ ಸೆಟ್ನಲ್ಲಿ ನಿರಾಯಾಸವಾಗಿ ಗೆದ್ದ ಅಮೆರಿಕನ್ ಕೃಷ್ಣ ಸುಂದರಿಗೆ ಎರಡನೇ ಸೆಟ್ನಲ್ಲಿ ಗ್ರೀಕ್ ಆಟಗಾರ್ತಿ ಬಲವಾದ ಪೈಪೋಟಿ ನೀಡಿದ್ರೆ, ಕೊನೆಗೆ ಟೈ ಬ್ರೇಕರ್ನಲ್ಲಿ ಸೆರೆನಾ ವಿರುದ್ಧ ಗೆಲುವು ಸಾಧಿಸಿದರು. ಆದರೆ, ಮೂರನೇ ಸೆಟ್ನಲ್ಲಿ ತಿರುಗಿಬಿದ್ದ ವಿಲಿಯಮ್ಸ್ 6-3ರಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಈ ಮೂಲಕ ದಾಖಲೆಯ 53ನೇ ಬಾರಿ ಎಂಟರ ಘಟಕ್ಕೆ ಪ್ರವೇಶಿಸಿದರು.
ಸೆರೆನಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲೈಜ್ ಕಾರ್ನೆಟ್ ಅವರನ್ನು ಮಣಿಸಿರುವ ಬಲ್ಗೇರಿಯಾದ ಸ್ವೆಟಾನಾ ಪಿರೊಂಕೋವಾ ವಿರುದ್ಧ ಸೆಣಸಾಡಲಿದ್ದಾರೆ.
ಇದೇ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದ ಸಂದರ್ಭದಲ್ಲಿ ಯುಎಸ್ ಓಪನ್ನ ಸಿಂಗಲ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವು(102) ಪಡೆದ ದಾಖಲೆ ಮುರಿದಿದ್ದ ಸೆರೆನಾ ನಿನ್ನೆಯ ಪಂದ್ಯದಲ್ಲಿ ಆರ್ಥರ್ ಆಶೆ ಸ್ಟೇಡಿಯಂನಲ್ಲಿ 100 ಗೆಲುವು ಸಾಧಿಸಿದ ಏಕೈಕ ಟೆನ್ನಿಸ್ ಆಟಗಾರ್ತಿ ಎಂಬ ದಾಖಲೆಗೂ ಪಾತ್ರರಾದರು.