ನ್ಯೂಯಾರ್ಕ್ :ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಡೆನಿಸ್ ಶಪೊವಾಲೋವ್ ಜೋಡಿ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ನಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದೆ. ಈ ಮೂಲಕ ಭಾರತದ ಸವಾಲು ಕೂಡ ಅಂತ್ಯವಾಗಿದೆ.
ಸೋಮವಾರ ತಡರಾತ್ರಿ(1:30) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡೊ-ಕೆನಡಿಯನ್ ಜೋಡಿ 5-7, 5-7 ನೇರ ಸೆಟ್ಗಳಿಂದ ನೆದರ್ಲೆಂಡ್ಸ್ನ ಜೀನ್ ಜಿಲಿಯನ್ ರೋಜರ್ ಮತ್ತು ರೊಮೇನಿಯಾದ ಹೊರಿಯಾ ಟೆಕಾವು ಜೋಡಿ ವಿರುದ್ಧ ಸೋತಿದೆ.