ನ್ಯೂಯಾರ್ಕ್: ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಅಮೆರಿಕಾದ ಪ್ರಬಲ ಸೆರೆನಾ ವಿಲಿಯಮ್ಸ್ ಎದುರು ಕೆನಡಾದ ಹದಿಹರೆಯದ 19 ವರ್ಷದ ಚೆಲುವೆ ಬಿಯಾಂಕಾ ಆಂಡ್ರಿಸ್ಕು ಕಣಕ್ಕಿಳಿದು ಸೋಲಿನ ರುಚಿ ತೋರಿಸಿದ್ದಾರೆ. ಈ ಮೂಲಕ ಮೊದಲ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಯುಎಸ್ ಓಪನ್ ಫೈನಲ್: ಸೆರೆನಾಗೆ ಸೋಲಿನ ರುಚಿ ತೋರಿಸಿದ 19ರ ಚೆಲುವೆ!
ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್ನ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್, 15ನೇ ಶ್ರೇಯಾಂಕಿತ ಕೆನೆಡಾದ ಬಿಯಾಂಕಾ ಆಂಡ್ರಿಸ್ಕು ವಿರುದ್ಧ ಸೋಲು ಕಂಡಿದ್ದಾರೆ.
ಬಿಯಾಂಕಾ ಆಂಡ್ರಿಸ್ಕು
ಫೈನಲ್ ಪಂದ್ಯದಲ್ಲಿ ವಿಲಿಯಮ್ಸ್ ವಿರುದ್ಧ 6-3, 7-5 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿ ಚೊಚ್ಚಲ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಸಹ ಸೆರೆನಾ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದರು.
19ರ ಹರೆಯದ ಬಿಯಾಂಕಾ ಸೆಮಿಫೈನಲ್ ಪಂದ್ಯದಲ್ಲಿ ಸ್ವಿಸ್ ಆಟಗಾರ್ತಿ ಬೆನ್ಸಿಕ್ ಅವರನ್ನು 7-6 (7/3), 7-5ರ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶ ಪಡೆದುಕೊಂಡಿದ್ದರೆ, 37ರ ಹರೆಯದ ಸೆರೆನಾ,ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ವಿರುದ್ಧ 6-3, 6-1ರ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ್ದರು.
Last Updated : Sep 8, 2019, 6:32 AM IST