ನ್ಯೂಯಾರ್ಕ್(ಅಮೆರಿಕ): ಟೆನ್ನಿಸ್ ಇತಿಹಾಸದಲ್ಲೇ ಪ್ರತಿಷ್ಠಿತ ಅಮೆರಿಕನ್ ಓಪನ್ನ ಮಹಿಳೆಯರ ಸಿಂಗಲ್ಸ್ ಗ್ರಾಂಡ್ಸ್ಲಾಮ್ ವಿಭಾಗದಲ್ಲಿ ಮೊದಲ ಬಾರಿಗೆ ಬ್ರಿಟನ್‌ನ 18 ವರ್ಷದ ಎಮ್ಮಾ ರಾಡುಕಾನು ಪ್ರಶಸ್ತಿ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಕೆನಡಾದ ಲೇಲಾ ಫೆರ್ನಾಂಡಿಸ್ ಅವರನ್ನು ಸೋಲಿಸಿದ ಎಮ್ಮಾ ರಾಡುಕನು 53 ವರ್ಷಗಳ ನಂತರ ಸಿಂಗಲ್ಸ್ ಗ್ರಾಂಡ್ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಬ್ರಿಟಿಷ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ. ಲೇಲಾ ಫರ್ನಾಂಡೀಸ್ ವಿರುದ್ಧ 6-4, 6-3ರ ನೇರ ಅಂತರದಲ್ಲಿ ರಾಡುಕಾನು ಗೆಲುವು ಸಾಧಿಸಿದ್ದಾರೆ.
ನ್ಯೂಯಾರ್ಕ್ನ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ಪಂದ್ಯ ನಡೆದಿದ್ದು, '53 ವರ್ಷಗಳ ಕಾಯುವಿಕೆ ಅಂತ್ಯವಾಗಿದೆ. 1968ರಿಂದ ಇದೇ ಮೊದಲ ಬಾರಿಗೆ ಬ್ರಿಟನ್‌ನ ಎಮ್ಮಾ ರಾಡುಕಾನು ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ' ಎಂದು ಯುಎಸ್ ಓಪಬ್ ಟ್ವೀಟ್ ಮಾಡಿದೆ.