ಕರ್ನಾಟಕ

karnataka

ETV Bharat / sports

ಡೊಮಿನಿಕ್ ಥೀಮ್​ ವಿರುದ್ಧ ಸೋಲು... ಯುಎಸ್ ಓಪನ್​ನಿಂದ ಹೊರಬಿದ್ದ ಸುಮಿತ್ ನಗಲ್ - ಸುಮಿತ್ ನಗಲ್​ಗೆ ಸೋಲು

ಯುಎಸ್ ಓಪನ್ ಸಿಂಗಲ್ಸ್​ನಲ್ಲಿ ಡೊಮಿನಿಕ್ ಥೀಮ್ ವಿರುದ್ಧ ಸೋಲು ಅನುಭವಿಸಿದ ಭಾರತೀಯ ಟೆನ್ನಿಸ್ ಆಟಗಾರ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Sumit Nagal loses to birthday boy Dominic Thiem
ಯುಎಸ್ ಓಪನ್​ನಿಂದ ಹೊರ ಬಿದ್ದ ಸುಮಿತ್ ನಗಲ್

By

Published : Sep 4, 2020, 11:31 AM IST

ನ್ಯೂಯಾರ್ಕ್: ವಿಶ್ವದ ಮೂರನೇ ಶ್ರೇಯಾಂಕಿತ ಡೊಮಿನಿಕ್ ಥೀಮ್ ಅವರ ಕೈಯಲ್ಲಿ 3-6, 3-6, 2-6 ಸೆಟ್‌ಗಳಿಂದ ಸೋಲನುಭವಿಸಿದ ಭಾರತದ ಟೆನ್ನಿಸ್ ತಾರೆ ಸುಮಿತ್ ನಗಲ್ ಯುಎಸ್ ಓಪನ್‌ನಿಂದ ಹೊರಬಿದ್ದಿದ್ದಾರೆ.

27ನೇ ಜನ್ಮ ದಿನದ ಸಂಭ್ರಮದಲ್ಲಿದ್ದ ಡೊಮಿನಿಕ್ ಥೀಮ್ ಭಾರತದ ಸುಮಿತ್ ನಗಲ್ ರನ್ನು ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ಸುಮಿತ್ ನಗಲ್

ಈ ವರ್ಷದ ಆಸ್ಟ್ರೇಲಿಯನ್ ಓಪನ್ ಫೈನಲಿಸ್ಟ್ ಥೀಮ್ ಅವರು ನಗಲ್ ಆಟದ ವಿಡಿಯೋಗಳನ್ನು ನೋಡಿದ್ದಾರೆ. ನಗಲ್ ಅವರ ಸಾಮರ್ಥ್ಯ ಗಮನಿಸಿ, ಚೆನ್ನಾಗಿ ತಯಾರಾಗಿ ಬಂದಿದ್ದಾರೆ. ಫೋರ್‌ಹ್ಯಾಂಡ್ ಬದಿಯಲ್ಲಿ ಅನೇಕ ಚೆಂಡುಗಳನ್ನು ನೀಡದಿರುವ ಸ್ಪಷ್ಟ ತಂತ್ರದೊಂದಿಗೆ ಕಣಕ್ಕಿಳಿದಿದ್ದರು.

ಗ್ರ್ಯಾಂಡ್​ ಸ್ಲಾಮ್​ನಲ್ಲಿ ಭಾರತಕ್ಕೆ ಅಪರೂಪದ ಗೆಲುವು ತಂದುಕೊಟ್ಟಿದ್ದ ನಗಲ್ ಹೊಸ ಭರವಸೆ ಮೂಡಿಸಿದ್ದರು. ಆದರೆ ಎರಡು ಫ್ರೆಂಚ್ ಓಪನ್ ಫೈನಲ್ ಪಂದ್ಯಗಳನ್ನು ಆಡಿರುವ ಆಟಗಾರನನ್ನು ಎದುರಿಸುವುದು ಅವರಿಗೆ ಸವಾಲಿನ ಕೆಲಸವಾಗಿತ್ತು.

ABOUT THE AUTHOR

...view details