ಲಂಡನ್ :ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ ಕಾರಣ ರಷ್ಯಾದ ಟೆನಿಸ್ ಆಟಗಾರರಾದ ಅಲಿಜಾ ಮೆರ್ಡೀವಾ ಮತ್ತು ಸೋಫಿಯಾ ಡಿಮಿಟ್ರಿವಾ ಅವರು ಜೀವಾವಧಿ ನಿಷೇಧಕ್ಕೆ ಒಳಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಟೆನಿಸ್ ಸಮಗ್ರತೆ ಸಂಸ್ಥೆ (ಐಟಿಐಎ) ಹೇಳಿದೆ.
ಫಿಕ್ಸಿಂಗ್ನ ಎರಡು ಪ್ರಕರಣಗಳಲ್ಲಿ ಅಲಿಜಾ ಮೆರ್ಡೀವಾ ಮತ್ತು ಆರು ಪ್ರಕರಣಗಳಲ್ಲಿ ಸೋಫಿಯಾ ಡಿಮಿಟ್ರಿವಾ ತಪ್ಪಿತಸ್ಥರು ಎಂಬುದು ಸಾಬೀತಾಗಿದೆ. ಅಲ್ಲದೆ, ತನಿಖೆಗೆ ಸಹಕರಿಸದ ಆರೋಪವೂ ಅವರ ಮೇಲಿತ್ತು. ಮೆರ್ಡೀವಾ ಅವರ ಅತ್ಯುನ್ನತ ಶ್ರೇಯಾಂಕವು ವಿಶ್ವದ 928ನೇ ಸ್ಥಾನ ಮತ್ತು ಡಿಮಿಟ್ರಿವಾ 1,191ನೇ ಸ್ಥಾನದಲ್ಲಿದೆ.
ಇದನ್ನೂ ಓದಿ...ವರ್ಲ್ಡ್ ಟೂರ್ ಫೈನಲ್ಸ್: ಆ್ಯಂಡರ್ಸ್ ಆಂಟನ್ಸನ್ ವಿರುದ್ಧ ಸೋಲು ಕಂಡ ಕಿಡಂಬಿ ಶ್ರೀಕಾಂತ್
ಡಬಲ್ಸ್‌ನಲ್ಲಿ ಒಟ್ಟಿಗೆ ಆಡಿದ ಎರಡು ಪಂದ್ಯಗಳು ಈ ಫಿಕ್ಸಿಂಗ್ಗೆ ಒಳಗೊಂಡಿವೆ. ಆದರೆ, ಯಾವ ಟೂರ್ನಮೆಂಟ್ ಎಂಬುದರ ಕುರಿತು ಐಟಿಐಎ ಮಾಹಿತಿ ನೀಡಿಲ್ಲ. ವಿಶ್ವದಾದ್ಯಂತ ಕೆಳ ಮಟ್ಟದ ಟೂರ್ನಮೆಂಟ್ಗಳಿಗೆ ಪ್ರವಾಸ ಕೈಗೊಂಡಿದ್ದ ಅವರು, ಆಫ್ರಿಕಾ, ಟರ್ಕಿ ಮತ್ತು ಪೂರ್ವ ಯುರೋಪಿನಲ್ಲಿ ಒಟ್ಟಿಗೆ ಆಡಿದ್ದಾರೆ.
2019ರ ಕೀನ್ಯಾದಲ್ಲಿ ನಡೆದ ಎರಡು ಡಬಲ್ಸ್ ಟೂರ್ನಮೆಂಟ್ನಲ್ಲಿ ಮೆರ್ಡೀವಾ ಮತ್ತು ಡಿಮಿಟ್ರಿವಾ ಜೊತೆಯಾಗಿ ಆಡಿದ್ದರು ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ದಾಖಲೆಗಳು ಹೇಳುತ್ತವೆ. ಇಬ್ಬರೂ ಡಬಲ್ಸ್‌ನಲ್ಲಿ ಹೆಚ್ಚಿನ ಯಶಸ್ಸು ಗಳಿಸಿದ್ದಾರೆ ಎಂದು ಫೆಡರೇಶನ್ ಹೇಳಿದೆ.