ಮೆಲ್ಬೋರ್ನ್ :ದಾಖಲೆಯ 20 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯ ಒಡೆಯ ರಾಫೆಲ್ ನಡಾಲ್ ಆಘಾತಕಾರಿ ಸೋಲುಣಿಸಿರುವ ಗ್ರೀಕ್ ಆಟಗಾರ ಸ್ಟೆಫಾನೋಸ್ ಸಿಟ್ಸಿಪಾಸ್ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬೋರ್ನ್ನ ರಾಡ್ ಲೇವರ್ ಅರೇನಾದಲ್ಲಿ ನಡೆದ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ಸ್ಪೇನಿನ ಸ್ಟಾರ್ ಆಟಗಾರ ನಡಾಲ್ ವಿರುದ್ಧ 22 ವರ್ಷದ ಸಿಟ್ಸಿಪಾಸ್ 3-6,2-6,7(7)-6(4), 6-4,7-5ರಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.
ಮೊದಲೆರಡು ಸೆಟ್ಗಳಲ್ಲಿ ಸೋಲು ಕಂಡ ಯುವ ಆಟಗಾರ ಅನುಭವಿ ನಡಾಲ್ ವಿರುದ್ಧ ಅದ್ಭುತವಾಗಿ ತಿರುಗಿ ಬಿದ್ದು ಮುಂದಿನ 3 ಸೆಟ್ಗಳಲ್ಲಿ ಗೆಲುವು ಸಾಧಿಸಿ ವೃತ್ತಿ ಜೀವನದ 3ನೇ ಗ್ರ್ಯಾಂಡ್ಸ್ಲಾಮ್ ಸೆಮಿಫೈನಲ್ ಪ್ರವೇಶಿಸಿದರು. ಅವರು ಈ ಹಿಂದೆ 2019ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು 2020ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.