ವಿಂಬಲ್ಡನ್(ಇಂಗ್ಲೆಂಡ್): ಟೆನ್ನಿಸ್ ಜಗತ್ತಿನ ಪ್ರತಿಷ್ಠಿತ ಗ್ರಾಂಡ್ಸ್ಲಾಮ್ಗಳಲ್ಲಿ ಒಂದಾದ ವಿಂಬಲ್ಡನಲ್ಲಿ ಟೆನ್ನಿಸ್ ದಿಗ್ಗಜೆ ವೀನಸ್ ವಿಲಿಯಮ್ಸ್ರನ್ನು 15 ವರ್ಷದ ಅಮೇರಿಕಾ ಬಾಲಕಿ ಕೋರಿ ಗಾಫ್ ಮಣಿಸುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ.
ವೀನಸ್ ವಿಲಿಯಮ್ಸ್ರನ್ನು ತನ್ನ ಡೆಬ್ಯೂಟ್ ಪಂದ್ಯದಲ್ಲಿಯೇ ಮಣಿಸಿ ಇತಿಹಾಸ ನಿರ್ಮಿಸಿದ 15 ವರ್ಷದ ಬಾಲಕಿ! - ವೀನಸ್ ವಿಲಿಯಮ್ಸ್
ಟೆನ್ನಿಸ್ ಜಗತ್ತಿನ ಪ್ರತಿಷ್ಠಿತ ಗ್ರಾಂಡ್ಸ್ಲಾಮ್ಗಳಲ್ಲಿ ಒಂದಾದ ವಿಂಬಲ್ಡನಲ್ಲಿ ಟೆನ್ನಿಸ್ ದಿಗ್ಗಜೆ ವೀನಸ್ ವಿಲಿಯಮ್ಸ್ರನ್ನು 15 ವರ್ಷದ ಅಮೇರಿಕಾ ಬಾಲಕಿ ಕೋರಿ ಗಾಫ್ ಮಣಿಸುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ.
Venus Williams
ವಿಂಬಲ್ಡನ್ಗೆ ಆಯ್ಕೆಯಾದ ವಿಶ್ವದ ಕಿರಿಯ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದ ಕೋರಿ ತಮ್ಮ ಪದಾರ್ಪಣೆ ಪಂದ್ಯದಲ್ಲಿ ತಮ್ಮ ರೋಲ್ ಮಾಡೆಲ್ ಆದ ವೀನಸ್ ವಿಲಿಯಮ್ಸ್ರನ್ನು 6-4,6-4 ರ ನೇರ ಸೆಟ್ಗಳಲ್ಲಿ ಮಣಿಸುವ ಮೂಲಕ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
1000 ಕ್ಕೂ ಹೆಚ್ಚು ಟೆನ್ನಿಸ್ ಪಂದ್ಯಗಳನ್ನಾಡಿರುವ ವೀನಸ್, 100ಕ್ಕೂ ಹೆಚ್ಚು ಪಂದಗಳನ್ನಾಡಿರುವ ಟೆನ್ನಿಸ್ ಕೋರ್ಟ್ನಲ್ಲಿ ಇಂದೇ ವೃತ್ತಿ ಜೀವನದ ಮೊದಲ ಪಂದ್ಯವಾಡಿದ 15 ವರ್ಷದ ಕೋರಿ ಗಾಫ್ ಮುಂದೆ ಸಂಪೂರ್ಣವಾಗಿ ತಲೆಬಾಗಿದರು.