ನ್ಯೂಯಾರ್ಕ್: ಯುಎಸ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 2-6, 4-6, 6-4, 6-3, 7-6 (6) ಸೆಟ್‌ಗಳಿಂದ ಸೋಲಿಸಿದ ಡೊಮಿನಿಕ್ ಥೀಮ್ ಚೊಚ್ಚಲ ಗ್ರ್ಯಾಂಡ್ಸ್ಲಾಮ್ಗೆ ಮುತ್ತಿಕ್ಕಿದರು.
ಯುಎಸ್ ಓಪನ್: ಜ್ವೆರೆವ್ಗೆ ಸೋಲುಣಿಸಿ ಚೊಚ್ಚಲ ಗ್ರ್ಯಾಂಡ್ಸ್ಲಾಮ್ ಗೆದ್ದ ಡೊಮಿನಿಕ್ ಥೀಮ್
ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ಗೆ ಸೋಲುಣಿಸಿದ ಡೊಮಿನಿಕ್ ಥೀಮ್ ಚೊಚ್ಚಲ ಗ್ರ್ಯಾಂಡ್ಸ್ಲಾಮ್ ಜಯಿಸಿದ್ದಾರೆ.
ಜ್ವೆರೆವ್ಗೆ ಸೋಲುಣಿಸಿ ಚೊಚ್ಚಲ ಗ್ರಾಂಡ್ಸ್ಲಾಮ್ ಗೆದ್ದ ಡೊಮಿನಿಕ್ ಥೀಮ್
27ರ ಹರೆಯದ ಥೈಮ್, ಮರಿನ್ ಸಿಲಿಕ್(2014) ನಂತರ ಗ್ರ್ಯಾಂಡ್ಸ್ಲಾಮ್ ಗೆದ್ದ ಕಿರಿಯ ಆಟಗಾರ ಎನಿಸಿದರು. 1949ರಲ್ಲಿ ಪಾಂಚೋ ಗೊನ್ಜಾಲ್ಸ್ ನಂತರ ಮೊದಲ ಎರಡು ಸೆಟ್‌ಗಳಲ್ಲಿ ಸೋತರೂ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಮೊದಲ ಎರಡು ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಥೀಮ್ ನಂತರ ಕಮ್ಬ್ಯಾಕ್ ಮಾಡಿದ್ರು. ನಂತರದ 2 ಸೆಟ್‌ಗಳಲ್ಲಿ ಪ್ರಬಲ ಪೈಪೋಟಿ ನೀಡಿದ್ರು. ಅಂತಿಮವಾಗಿ ಟೈ ಬ್ರೇಕರ್ನಲ್ಲಿ ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ಗೆ ಸೋಲುಣಿಸಿ ಪ್ರಶಸ್ತಿ ಗೆದ್ದುಕೊಂಡರು.