ಕರ್ನಾಟಕ

karnataka

ETV Bharat / sports

ಟೂರ್ನಿಗೆ ಏಳು ದಿನ ಇರುವಾಗ ಒಲಿದ ಅದೃಷ್ಟ: Tokyo Olympicsಗೆ ಅರ್ಹತೆ ಪಡೆದ ಸುಮಿತ್ ನಗಾಲ್

ಜುಲೈ 23 ರಿಂದ ಪ್ರಾರಂಭವಾಗಲಿರುವ Tokyo Olympics -20 ಕ್ಕೆ ಒಂದು ವಾರ ಬಾಕಿ ಇರುವಾಗ ಭಾರತೀಯ ಟೆನ್ನಿಸ್ ಆಟಗಾರ ಸುಮಿತ್ ನಗಾಲ್ ಟೂರ್ನಿಗೆ ಆರ್ಹತೆ ಪಡೆದಿದ್ದಾರೆ.

By

Published : Jul 17, 2021, 10:04 AM IST

Sumit Nagal qulified
ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಸುಮಿತ್ ನಗಾಲ್

ನವದೆಹಲಿ : ಭಾರತೀಯ ಟೆನ್ನಿಸ್ ಆಟಗಾರ ಸುಮಿತ್ ನಗಾಲ್ ಟೂರ್ನಿ ಆರಂಭವಾಗುವ ಏಳು ದಿನಗಳ ಮೊದಲು, ಶುಕ್ರವಾರ Tokyo Olympics​ನ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸುಮಿತ್ ಸಂತಸ ವ್ಯಕ್ತಪಡಿಸಿದ್ದಾರೆ.

ಕೆಲ ಕ್ರೀಡಾಪಟುಗಳು ಕೋವಿಡ್ ಹಿನ್ನೆಲೆ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆ ಕಾರಣಕ್ಕೆ ಕಟ್ ಆಫ್ ಮಿತಿಯನ್ನು ಕಡಿಮೆ ಮಾಡಲಾಗಿದೆ. ಹಾಗಾಗಿ, ಸುಮಿತ್ ನಗಾಲ್ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ ಎಂದು ಆಲ್​ ಇಂಡಿಯನ್ ಟೆನ್ನಿಸ್ ಆಸೋಶಿಯೇಶನ್ (ಏಐಟಿಎ) ಪ್ರಧಾನ ಕಾರ್ಯದರ್ಶಿ ಅನಿಲ್ ಧೂಪರ್ ತಿಳಿಸಿದ್ದಾರೆ.

ಓದಿ :'ಒಲಿಂಪಿಕ್ಸ್‌ನಲ್ಲಿ ಆಡುವುದು ಬಾಲ್ಯದ ಕನಸು; ಅಗ್ರ ಶ್ರೇಯಾಂಕಿತರನ್ನು ಮಣಿಸುವುದೇ ನನ್ನ ಗುರಿ'

ಆಟಗಾರರು ಟೂರ್ನಿಯಿಂದ ಹಿಂದೆ ಸರಿದ ಕಾರಣ ಸುಮಿತ್ ಅರ್ಹತೆ ಪಡೆದಿದ್ದಾರೆ. ಈ ಬಗ್ಗೆ ನಾವು ಒಲಿಂಪಿಕ್ಸ್ ಸಮಿತಿಯಿಂದ E-Mail ಸ್ವೀಕರಿಸಿದ್ದೇವೆ. ಸುಮಿತ್​ಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಸಮಯ ಬಹಳ ಕಡಿಮೆ ಇದ್ದು, ಅದಕ್ಕನುಗುಣವಾಗಿ ನಾವು ಕೆಲಸ ಮಾಡಬೇಕಿದೆ ಎಂದು ಧೂಪರ್ ಹೇಳಿದ್ದಾರೆ.

ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಬಗ್ಗೆ 23 ವರ್ಷದ ಸುಮಿತ್ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದು, ನಾನು ಈಗ ಯಾವ ಫೀಲ್​ನಲ್ಲಿದ್ದೇನೆ ಎಂಬುವುದನ್ನು ತಿಳಿಸಲು ಪದಗಳು ಸಾಲುತ್ತಿಲ್ಲ. ನಿಮ್ಮೆಲ್ಲರ ಬೆಂಬಲ ಮತ್ತು ಹಾರೈಕೆಗೆ ಧನ್ಯವಾದಗಳು ಎಂದಿದ್ದಾರೆ.

ಕೋವಿಡ್ ಆತಂಕದ ನಡುವೆ ಜಪಾನ್​ನ ಟೋಕಿಯೋ ನಗರದಲ್ಲಿ 2021 ಜುಲೈ 23 ರಿಂದ ಆಗಸ್ಟ್ 8ವರೆಗೆ 2021 ರ ಒಲಿಂಪಿಕ್ಸ್ ಟೂರ್ನಿ -20 ನಡೆಯಲಿದೆ.

ABOUT THE AUTHOR

...view details