ಕರ್ನಾಟಕ

karnataka

ETV Bharat / sports

ಕೊರೊನಾ ಭೀತಿ: ಯುಎಸ್ ಓಪನ್‌ನಿಂದ ಹಿಂದೆ ಸರಿದ ಸ್ವಿಟೋಲಿನಾ, ಬರ್ಟೆನ್ಸ್ - ಯುಎಸ್ ಓಪನ್‌ನಿಂದ ಹಿಂದೆ ಸರಿದ ಬರ್ಟೆನ್ಸ್

ಕೊರೊನಾ ಸೋಂಕಿನ ಭೀತಿಯಿಂದಾಗಿ ಕಳವಳ ವ್ಯಕ್ತಪಡಿಸಿರುವ ಟೆನಿಸ್ ಸ್ಟಾರ್​ ಆಟಗಾರ್ತಿಯರು ಯುಎಸ್​ ಓಪನ್​ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

Svitolina, Bertens withdraw from US Open
ಯುಎಸ್ ಓಪನ್‌ನಿಂದ ಹಿಂದೆ ಸರಿದ ಸ್ವಿಟೋಲಿನಾ, ಬರ್ಟೆನ್ಸ್

By

Published : Aug 8, 2020, 12:26 PM IST

ನ್ಯೂಯಾರ್ಕ್: ಕೋವಿಡ್-19 ಕಳವಳವನ್ನು ಉಲ್ಲೇಖಿಸಿ ವಿಶ್ವದ 5ನೇ ಕ್ರಮಾಂಕದ ಟೆನಿಸ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಮತ್ತು ನಂ .7 ನೇ ಆಟಗಾರ್ತಿ ಕಿಕಿ ಬರ್ಟೆನ್ಸ್ ಈ ವರ್ಷದ ಯುಎಸ್ ಓಪನ್‌ನಿಂದ ಹೊರ ಬಂದಿದ್ದಾರೆ.

ಇದಕ್ಕೂ ಮೊದಲು ವಿಶ್ವ ನಂ .1 ಆಟಗಾರ್ತಿ ಆಶ್ಲೇ ಬಾರ್ಟಿ ಕೂಡ ನ್ಯೂಯಾರ್ಕ್‌ನ ಗ್ರ್ಯಾಂಡ್ ಸ್ಲ್ಯಾಮ್‌ನಿಂದ ಹಿಂದೆ ಸರಿದಿದ್ದರು.

ಯುಎಸ್ ಓಪನ್ ಪ್ರಸ್ತುತ ಆಗಸ್ಟ್ 31 ರಿಂದ ನಡೆಯಲಿದೆ. ಹೆಚ್ಚುತ್ತಿರುವ COVID-19 ಪ್ರಕರಣಗಳಿಂದಾಗಿ, ಟೆನಿಸ್ ತಾರೆಗಳು ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ವಿಟೋಲಿನಾ ಟ್ವೀಟ್​​​​ ಮಾಡಿದ್ದು, ಎಲ್ಲ ಅಂಶಗಳನ್ನು ಪರಿಗಣಿಸಿ, 2020ರ ಯುಎಸ್ ಓಪನ್ ಆಡದಿರಲು ನಿರ್ಧರಿಸಿದ್ದೇನೆ. ಆಟಗಾರರಿಗೆ ಅವಕಾಶ ನೀಡಿದ ಯುಎಸ್​ಟಿಎ, ಸಂಘಟಕರು ಮತ್ತು ಡಬ್ಲ್ಯೂಟಿಎಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ

"ಸುರಕ್ಷಿತ ವಾತಾವರಣದಲ್ಲಿ ಟೂರ್ನಿ ನಡೆಸಲು ಅವರು ಮಾಡುತ್ತಿರುವ ಎಲ್ಲ ಪ್ರಯತ್ನಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಗೌರವಿಸುತ್ತೇನೆ. ಆದರೆ, ನನ್ನ ತಂಡವನ್ನು ಮತ್ತು ನನ್ನನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸದೇ ಯುಎಸ್​ಗೆ ಪ್ರಯಾಣಿಸದಿರಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.

ಬರ್ಟೆನ್ಸ್ ಕೂಡ ಇನ್​​ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಮೂಲಕ ತನ್ನ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸುದೀರ್ಘ ಪರಿಗಣನೆಯ ನಂತರ, ಯುಎಸ್ ಓಪನ್​ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. ಕೋವಿಡ್-19 ಪರಿಸ್ಥಿತಿ ಆತಂಕಕಾರಿಯಾಗಿದೆ ಮತ್ತು ಎಲ್ಲರ ಆರೋಗ್ಯ ಹಾಗೂ ಈ ವೈರಸ್‌ನ ನಿಯಂತ್ರಣವು ಆದ್ಯತೆಯಾಗಿದೆ" ಎಂದಿದ್ದಾರೆ.

ABOUT THE AUTHOR

...view details