ಕರ್ನಾಟಕ

karnataka

ETV Bharat / sports

ಯುಎಸ್ ಓಪನ್​: ಪಾದಾರ್ಪಣೆ ಪಂದ್ಯದಲ್ಲೇ ಫೆಡರರ್​ ಜೊತೆ ಯುವ ಭಾರತೀಯನ ಸೆಣಸಾಟ - ಸುಮಿತ್​ ನಾಗಲ್​-ರೋಜರ್​ ಫೆಡೆರರ್​

190ನೇ ಶ್ರೇಯಾಂಕದಲ್ಲಿ ಸುಮಿತ್​ ನಾಗಲ್​ ತಮ್ಮ ಗ್ರ್ಯಾಂಡ್​ಸ್ಲಾಮ್​ ಪಾದಾರ್ಪಣೆ ಪಂದ್ಯದಲ್ಲೇ ಟೆನ್ನಿಸ್​ ದಿಗ್ಗಜ ರೋಜರ್​ ಫೆಡರರ್​ ಅವರನ್ನು ಎದುರಿಸಲಿದ್ದಾರೆ.

Sumit Nagal

By

Published : Aug 25, 2019, 9:59 AM IST

ನ್ಯೂಯಾರ್ಕ್‌: ಅರ್ಹತಾ ಸುತ್ತಿನಲ್ಲಿ ಬ್ರೆಜಿಲ್​ ಆಟಗಾರರನನ್ನು ಮಣಿಸಿ ಅಮೆರಿಕ ಓಪನ್​ ಮೂಲಕ ಗ್ರ್ಯಾಂಡ್​ಸ್ಲಾಮ್​ಗೆ ಎಂಟ್ರಿಕೊಡುತ್ತಿರುವ ಸುಮಿತ್​ ನಾಗಲ್​ಗೆ ಮೊದಲ ಸುತ್ತಿನಲ್ಲಿ ಟೆನ್ನಿಸ್​ ಲೋಕದ ದಂತಕತೆಯಾಗಿರುವ ರೋಜರ್​ ಫೆಡರರ್​ ಅವರನ್ನು ಎದುರಿಸಬೇಕಾಗಿದೆ.

ಭಾರತದ ಪರ ಅಮೆರಿಕ ಓಪನ್​ನ ಸಿಂಗಲ್ಸ್​ನಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಗ್ರ್ಯಾಂಡ್​ಸ್ಲಾಮ್​ಗೆ ಅರ್ಹತೆ ಗಿಟ್ಟಿಸಿಜೊಂಡಿದ್ದಾರೆ. ಆದರೆ ಯುವ ಆಟಗಾರರಾದ ಸುಮಿತ್​ ಫೆಡರರ್​ರನ್ನು, ಮತ್ತೋರ್ವ ಆಟಗಾರ ಗುಣೇಶ್ವರನ್​ 5ನೇ ಶ್ರೇಯಾಂಕದ ರಷ್ಯಾದ ಮೆಡ್ವದೇವ್​ರನ್ನು ಎದುರಿಸಬೇಕಾಗಿದೆ.

ಭಾರತದ ಮಟ್ಟಿಗೆ ಗ್ರ್ಯಾಂಡ್​ಸ್ಲಾಮ್​ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದೇ ಬಹುದೊಡ್ಡ ವಿಚಾರ. ಆದರೆ ಮೊದಲ ಪಂದ್ಯದಲ್ಲಿ ಟಾಪ್​ ಪ್ಲೇಯರ್​ಗಳ ಜೊತೆ ಕಾದಾಡುತ್ತಿರುವುದು ಕುತೂಹಲದ ವಿಚಾರ. ಈ ಇಬ್ಬರು ಪ್ರತಿಷ್ಠಿತ ಗ್ರ್ಯಾಂಡ್​ಸ್ಲಾಮ್​ಗೆ 1998ರ ಬಳಿಕ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 1998ರ ವಿಂಬಲ್ಡನ್‌ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ಆಡಿದ್ದರು.

ಸುಮಿತ್‌ ನಾಗಲ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 190ನೇ ಸ್ಥಾನದಲ್ಲಿದ್ದರೆ, ಫೆಡರೆರ್​ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ಭಾರತದ ಆಟಗಾರ ಗೆದ್ದರೆ ಇತಿಹಾಸ, ಸೋತರೆ ಫೆಡರರ್​ ಅಂತಹ ಮಹಾನ್​ ದಿಗ್ಗಜನ ಜೊತೆ ಆಡಿದ ಶ್ರೇಯಕ್ಕೆ 22 ವರ್ಷದ ನಾಗಲ್​ ಪಾತ್ರರಾಗಲಿದ್ದಾರೆ.

ABOUT THE AUTHOR

...view details