ಕರ್ನಾಟಕ

karnataka

ETV Bharat / sports

ಅಸ್ತಾನಾ ಓಪನ್​ನಿಂದ ಹೊರಬಿದ್ದ ದಿವಿಜ್​ ಶರಣ್, ರೋಹನ್ ಬೋಪಣ್ಣ

ಗುರುವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ದಿವಿಜ್​ ತಮ್ಮ ಬ್ರಿಟಿಷ್​ ಪಾರ್ಟನರ್​​ ಲ್ಯೂಕ್​ ಬ್ಯಾಂಬ್ರಿಡ್ಜ್​ ಅವರ ಜೊತೆಗೂಡಿ ಆಸ್ಟ್ರೇಲಿಯಾ ಓಪನ್​ನ ರನ್ನರ್​ ಅಪ್ ಮ್ಯಾಕ್ಸ್​ ಪರ್ಸೆಲ್ ಮತ್ತು ಲ್ಯೂಕ್​ ಸೆವಿಲ್ಲೆ ವಿರುದ್ಧ ಸೆಣಸಾಡಿ ಸೋಲು ಕಂಡರು. ದಿವಿಜ್ ಜೋಡಿ 3-6, 5-7 ರ ಸೆಟ್​ಗಳ ಅಂತರದಲ್ಲಿ ಸೋಲು ಕಂಡರು.

By

Published : Oct 29, 2020, 10:50 PM IST

ರೋಹನ್ ಬೋಪಣ್ಣ
ರೋಹನ್ ಬೋಪಣ್ಣ

ನೂರ್​ ಸುಲ್ತಾನ್​:ದಿವಿಜ್ ಶರಣ್ ಕ್ವಾರ್ಟರ್​ ಫೈನಲ್​ನಲ್ಲಿ​ ಮತ್ತು ರೋಹಣ್​ ಬೋಪಣ್ಣ 16ರ ಹಂತದ ಪಂದ್ಯದಲ್ಲಿ ಸೋಲುವ ಮೂಲಕ ಆಸ್ತಾನಾ ಓಪನ್​ನಿಂದ ಹೊರಬಿದ್ದಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ದಿವಿಜ್​ ತಮ್ಮ ಬ್ರಿಟಿಷ್​ ಪಾರ್ಟನರ್​​ ಲ್ಯೂಕ್​ ಬ್ಯಾಂಬ್ರಿಡ್ಜ್​ ಅವರ ಜೊತೆಗೂಡಿ ಆಸ್ಟ್ರೇಲಿಯಾ ಓಪನ್​ನ ರನ್ನರ್​ ಅಪ್ ಮ್ಯಾಕ್ಸ್​ ಪರ್ಸೆಲ್ ಮತ್ತು ಲ್ಯೂಕ್​ ಸೆವಿಲ್ಲೆ ವಿರುದ್ಧ ಸೆಣಸಾಡಿ ಸೋಲುಕಂಡರು. ದಿವಿಜ್ ಜೋಡಿ 3-6, 5-7 ರ ಸೆಟ್​ಗಳ ಅಂತರದಲ್ಲಿ ಪರಾಭವ ಹೊಂದಿದರು.

ಮೊದಲ ಸೆಟ್​ನಲ್ಲಿ ಸೋತರು 2ನೇ ಸೆಟ್​ನಲ್ಲಿ 5-4ರಲ್ಲಿ ಮುನ್ನಡೆ ಸಾಧಿಸಿ ಸೆಟ್​ ಪಾಯಿಂಟ್​ ಹತ್ತಿರಕ್ಕೆ ಬಂದಿದ್ದರಾದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಆದರೂ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರಿಂದ 45 ಎಟಿಪಿ ರೇಟಿಂಗ್ ಪಾಯಿಂಟ್ ಮತ್ತು 3230 ಡಾಲರ್​ ಬಹುಮಾನ ಮೊತ್ತ ಪಡೆದರು.

ಆದರೆ, ಮತ್ತೊಬ್ಬ ಭಾರತೀಯ ರೋಹನ್ ಬೋಪಣ್ಣ - ಡ್ಯಾನಿಶ್​ ಜೋಡಿ ಕಠಿಣ ಪೈಪೋಟಿಯ ಹೊರತಾಗಿಯೂ ಮೊದಲ ಸುತ್ತಿನ ಪಂದ್ಯದಲ್ಲಿ ಮಾರ್ಸೆಲೊ ಅರೆವಾಲೊ ಹಾಗೂ ಟೊಮಿಸ್ಲಾವ್​ ವಿರುದ್ಧ 6-7(5), 7-6(3), 10-5ರ ಅಂತರದಲ್ಲಿ ಸೋಲು ಕಂಡರು. ಈ ಜೋಡಿ ಯಾವುದೇ ರೇಟಿಂಗ್ ಅಂಕ ಪಡೆಯದಿದ್ದರೂ, 2,650 ಡಾಲರ್​ ಮೊತ್ತ ಪಡೆದರು.

ABOUT THE AUTHOR

...view details