ಕರ್ನಾಟಕ

karnataka

ETV Bharat / sports

ನಡಾಲ್​ ಬೆನ್ನಲ್ಲೇ ಯುಎಸ್​ ಓಪನ್​ನಿಂದ ಹೊರಬಂದ ಸೆರೆನಾ ವಿಲಿಯಮ್ಸ್

ವಿಂಬಲ್ಡನ್​ ಓಪನ್​ನಲ್ಲೂ ಸೆರೆನಾ ಆಟದ ಮಧ್ಯದಲ್ಲೇ ನಿವೃತ್ತಿಯಾಗಿದ್ದರು. 7 ಬಾರಿ ವಿಂಬಲ್ಡನ್​ ಸಿಂಗಲ್ಸ್​ ಪ್ರಶಸ್ತಿ ಗೆದ್ದಿದ್ದ ಅವರು ತಮ್ಮ ಮೊದಲ ಸುತ್ತಿನಲ್ಲಿ 3-3ರಲ್ಲಿ ಸಮಬಲ ಸಾಧಿಸಿದ್ದ ವೇಳೆ ಆಟವನ್ನು ತ್ಯಜಿಸಿದ್ದರು.

Serena Williams withdraws from US Open due to injury
ಸೆರೆನಾ ವಿಲಿಯಮ್ಸ್​

By

Published : Aug 25, 2021, 7:15 PM IST

ನ್ಯೂಯಾರ್ಕ್: 23 ಗ್ರ್ಯಾಂಡ್​ಸ್ಲಾಮ್​ ಚಾಂಪಿಯನ್​ ಸೆರೆನಾ ವಿಲಿಯಮ್ಸ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಮುಂಬರುವ ಯುಎಸ್​ ಓಪನ್​ನಿಂದ ಹೊರಬಿದ್ದಿದ್ದಾರೆ.

" ನನ್ನ ವೈದ್ಯರು ಮತ್ತು ವೈದ್ಯಕೀಯ ತಂಡದ ಸಲಹೆಯ ನಂತರ ನಾನು ಯುಎಸ್​ ಓಪನ್​ನಿಂದ ನನ್ನ ಹೆಸರನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಮಂಡಿರಜ್ಜು ನೋವಿನಿಂದ ನನ್ನ ದೇಹವನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಮೆರಿಕದ ಖ್ಯಾತ ಟೆನಿಸ್ ತಾರೆ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನ್ಯೂಯಾರ್ಕ್ ವಿಶ್ವದ ಅತ್ಯಂತ ರೋಮಾಂಚಕಾರಿ ನಗರಗಳಲ್ಲಿ ಒಂದಾಗಿದೆ ಮತ್ತು ಆಡಲು ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ಈ ಟೂರ್ನಿಯಲ್ಲಿ ಅಭಿಮಾನಿಗಳನ್ನು ನೋಡುವುದನ್ನು ತಪ್ಪಿಸಿಕೊಳ್ಳುತ್ತೇನೆ, ಆದರೆ, ದೂರದಿಂದಲೇ ಎಲ್ಲರನ್ನು ಹುರಿದುಂಬಿಸುತ್ತೇನೆ. ನಿಮ್ಮೆಲ್ಲರ ನಿರಂತರ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು. ನಾನು ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ವಿಂಬಲ್ಡನ್​ ಓಪನ್​ನಲ್ಲೂ ಸೆರೆನಾ ಆಟದ ಮಧ್ಯದಲ್ಲೇ ನಿವೃತ್ತಿಯಾಗಿದ್ದರು. 7 ಬಾರಿ ವಿಂಬಲ್ಡನ್​ ಸಿಂಗಲ್ಸ್​ ಪ್ರಶಸ್ತಿ ಗೆದ್ದಿದ್ದ ಅವರು ತಮ್ಮ ಮೊದಲ ಸುತ್ತಿನಲ್ಲಿ 3-3ರಲ್ಲಿ ಸಮಬಲ ಸಾಧಿಸಿದ್ದ ವೇಳೆ ಆಟವನ್ನು ತ್ಯಜಿಸಿದ್ದರು.

ಇದನ್ನು ಓದಿ: ಯುಎಸ್​ ಓಪನ್ ಸೇರಿದಂತೆ 2021ರ ಎಲ್ಲಾ ಸ್ಪರ್ಧೆಯಿಂದಲೂ ರಾಫೆಲ್ ನಡಾಲ್ ಔಟ್​

ABOUT THE AUTHOR

...view details