ರೋಮ್: ಯುಎಸ್ ಓಪನ್ ಸೆಮಿಫೈನಲ್‌ನಲ್ಲಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಸೋಲು ಕಂಡ ಸೆರೆನಾ ವಿಲಿಯಮ್ಸ್ ಗಾಯದ ಸಮಸ್ಯೆಯಿಂದ ಮುಂಬರುವ ಇಟಾಲಿಯನ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಸಂಘಟಕರು ಪ್ರಕಟಿಸಿದ್ದಾರೆ.
'ಹಿಂಗಾಲು ಗಾಯದಿಂದಾಗಿ ಸೋಮವಾರದಿಂದ ಆರಂಭವಾಗುತ್ತಿರುವ ಇಟಾಲಿಯನ್ ಓಪನ್‌ನಿಂದ ಸೆರೆನಾ ವಿಲಿಯಮ್ಸ್ ಹಿಂದೆ ಸರಿದಿದ್ದಾರೆ' ಎಂದು ಇಟಾಲಿಯನ್ ಓಪನ್ ಹೇಳಿದೆ.
'ಗಾಯದ ಒತ್ತಡದಿಂದಾಗಿ ನಾನು ಇಟಾಲಿಯನ್ ಓಪನ್‌ನಿಂದ ಹಿಂದೆ ಸರಿಯಬೇಕಾಗಿದೆ. ರೋಮ್ನಲ್ಲಿನ ನನ್ನ ಅಭಿಮಾನಿಗಳ ನಿರಂತರ ಬೆಂಬಲಕ್ಕೆ ನಾನು ತುಂಬಾ ವಿನಮ್ರಳಾಗಿದ್ದೇನೆ ಮತ್ತು ಶೀಘ್ರದಲ್ಲೇ ಹಿಂದಿರುಗಲು ಎದುರು ನೋಡುತ್ತಿದ್ದೇನೆ' ಎಂದು ಸೆರೆನಾ ವಿಲಿಯಮ್ಸ್ ಅವರ ಹೆಳಿಕೆಯನ್ನು ಉಲ್ಲೇಖಿಸಿದ್ದಾರೆ.
ಅಜರೆಂಕಾ ವಿರುದ್ಧ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಲಿಯಮ್ಸ್ ಚಿಕಿತ್ಸೆಗಾಗಿ ಮೆಡಿಕಲ್ ಟೈಮ್ ಔಟ್ ತೆಗೆದುಕೊಂಡಿದ್ದರು.
2019ರ ಯುಎಸ್ ಓಪನ್ ಚಾಂಪಿಯನ್ ಬಿಯಾಂಕಾ ಆಂಡ್ರೀಸ್ಕು ಕೂಡ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಪುರುಷರ ವಿಭಾಗದಲ್ಲಿ ಯುಎಸ್ ಓಪನ್ ಫೈನಲಿಸ್ಟ್‌ಗಳಾದ ಡೊಮಿನಿಕ್ ಥೈಮ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ಇಬ್ಬರೂ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ.