ಕರ್ನಾಟಕ

karnataka

ETV Bharat / sports

ಮೂರು ತಿಂಗಳ ನಂತರ ಮೊದಲ ಜಯ ಸಾಧಿಸಿದ ಸೆರೆನಾ ವಿಲಿಯಮ್ಸ್​! - ಲಿಸಾ ಪಿಗಟೋ

23 ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ವಿಜೇತೆ ಸೋಮವಾರ ಎಮಿಲಿಯಾ ರೋಮಗ್ನಾ ಓಪನ್​ನಲ್ಲಿ 17 ವರ್ಷದ ಇಟಲಿಯ ಲಿಸಾ ಪಿಗಟೋ ವಿರುದ್ಧ 6-3, 6-2ರಲ್ಲಿ ಗೆಲುವು ಸಾಧಿಸಿದ್ದಾರೆ.

ಸೆರೆನಾ ವಿಲಿಯಮ್ಸ್​
ಸೆರೆನಾ ವಿಲಿಯಮ್ಸ್​

By

Published : May 17, 2021, 10:59 PM IST

ಪಾರ್ಮ(ಇಟಲಿ): ಅಮೆರಿಕಾದ ಸ್ಟಾರ್ಸ್​ ಟೆನಿಸ್​ ಆಟಗಾರ್ತಿ ಸೆರೆನಾ ವಿಲಿಯಮ್ಸ್ 3 ತಿಂಗಳ ನಂತರ ಮೊದಲ ಜಯ ಸಾಧಿಸಿದ್ದಾರೆ.

23 ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ವಿಜೇತೆ ಸೋಮವಾರ ಎಮಿಲಿಯಾ ರೋಮಗ್ನಾ ಓಪನ್​ನಲ್ಲಿ 17 ವರ್ಷದ ಇಟಲಿಯ ಲಿಸಾ ಪಿಗಟೋ ವಿರುದ್ಧ 6-3, 6-2ರಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ವಾರ ಇಟಾಲಿಯನ್ ಓಪನ್​ನಲ್ಲಿ 8ನೇ ಶ್ರೇಯಾಂಕದ ಆಟಗಾರ್ತಿ ಆರಂಭಿಕ ಪಂದ್ಯದಲ್ಲಿ ಸೋಲುಕಂಡು ನಿರಾಶೆಯನುಭವಿಸಿದ್ದರು.

ಇನ್ನು ಪಿಗಾಟೋ ಅವರಿಗೆ ಇದು ಮೊದಲ WTA ಪಂದ್ಯವಾದರೆ, ಸೆರೆನಾ ವಿಲಿಯಮ್ಸ್​ಗೆ 1001 ನೇ ಪಂದ್ಯವಾಗಿತ್ತು. 572 ನೇ ಶ್ರೇಯಾಂಕದ ಪಿಗಾಟೋ ಕಳೆದ ವರ್ಷ ಎಲಿಯೊನೊರಾ ಅಲ್ವಿಸಿ ಅವರ ಜೊತೆಗೂಡಿ ಬಾಲಕಿಯರ ಫ್ರೆಂಚ್ ಓಪನ್​ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.

ಇದನ್ನು ಓದಿ:WTA​ ರ‍್ಯಾಂಕಿಂಗ್​: ಟಾಪ್ 10ಕ್ಕೆ ಎಂಟ್ರಿಕೊಟ್ಟ 19 ವರ್ಷದ​ ಇಗಾ ಸ್ವಿಯಾಟೆಕ್

ABOUT THE AUTHOR

...view details