ಕರ್ನಾಟಕ

karnataka

ETV Bharat / sports

ಮಗು ಆದ ಬಳಿಕ ಟೆನಿಸ್​​ನಲ್ಲಿ ಸಾನಿಯಾ ಕಮಾಲ್​: ಹೋಬರ್ಟ್​ ಇಂಟರ್​ನ್ಯಾಷನಲ್ ಫೈನಲ್​ ತಲುಪಿದ ಮಿರ್ಜಾ - ಫೈನಲ್ ತಲುಪಿದ ಸಾನಿಯಾ ಮಿರ್ಜಾ ಜೋಡಿ

ಐದನೇ ಶ್ರೇಯಾಂಕಿತ ಇಂಡೋ-ಉಕ್ರೇನಿಯನ್ ಜೋಡಿ ಸಾನಿಯಾ ಮಿರ್ಜಾ ಮತ್ತು ನಾಡಿಯಾ ಕಿಚೆನೋಕ್ ಹೋಬರ್ಟ್​ ಇಂಟರ್​ನ್ಯಾಷನಲ್​ ಮಹಿಳಾ ಡಬಲ್ಸ್​ನಲ್ಲಿ ಫೈನಲ್‌ ಪ್ರವೇಶಿಸಿದೆ.

ania sails into women's doubles final,ಫೈನಲ್​ ತಲುಪಿದ ಸಾನಿಯಾ ಮಿರ್ಜಾ ಜೋಡಿ
ಫೈನಲ್​ ತಲುಪಿದ ಸಾನಿಯಾ ಮಿರ್ಜಾ ಜೋಡಿ

By

Published : Jan 17, 2020, 11:06 AM IST

ಹೋಬರ್ಟ್:ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಅವರ ಉಕ್ರೇನ್​ ಪಾಲುದಾರರಾದ ನಾಡಿಯಾ ಕಿಚೆನೋಕ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಹೋಬರ್ಟ್​ ಇಂಟರ್​ನ್ಯಾಷನಲ್​ ಮಹಿಳಾ ಡಬಲ್ಸ್​ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಐದನೇ ಶ್ರೇಯಾಂಕಿತ ಇಂಡೋ-ಉಕ್ರೇನಿಯನ್ ಜೋಡಿ ಸೆಮಿಫೈನಲ್ ಹಣಾಹಣಿಯಲ್ಲಿ ಸ್ಲೊವೇನಿಯನ್​-ಜೆಕ್​ ಜೋಡಿಯಾದ ತಮಾರಾ ಜಿಡಾನ್ಸೆಕ್​ ಮತ್ತು ಮೇರಿ ಬೌಜ್ಕೋವಾ ಅವರನ್ನು 7-6 (3) 6-2 ಸೆಟ್‌ಗಳಿಂದ ಸೋಲಿಸಿದೆ.

2017ರಲ್ಲಿ ಚೀನಾ ಓಪನ್​ನಲ್ಲಿ ಕೊನೆಯಾದಾಗಿ ಟೆನ್ನಿಸ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದ 33 ವರ್ಷದ ಸಾನಿಯಾ ಮಿರ್ಜಾ 2 ವರ್ಷಗಳ ನಂತರ ಟೆನ್ನಿಸ್​ ಅಂಗಳಕ್ಕೆ ಕಾಲಿರಿಸಿದ್ದು, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ABOUT THE AUTHOR

...view details