ಹೋಬರ್ಟ್: ಎರಡು ವರ್ಷಗಳ ಸುದೀರ್ಘ ಬ್ರೇಕ್ನ ನಂತರ ಟೆನ್ನಿಸದ್ ಮೈದಾನಕ್ಕೆ ಇಳಿದಿರುವ ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಆಸ್ಟ್ರೇಲಿಯಾದಲ್ಲಿ ನಡೆದ ಹೋಬರ್ಟ್ ಇಂಟರ್ನ್ಯಾಷನಲ್ ಮಹಿಳಾ ಡಬಲ್ಸ್ನಲ್ಲಿ ಫೈನಲ್ ಪಂದ್ಯದಲ್ಲಿ ಉಕ್ರೇನ್ ಆಟಗಾರ್ತಿ ಕಿಚೆನೋಕ್ ಜೊತೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಬ್ರೇಕ್ ಕೆ ಬಾದ್.. ಹೋಬರ್ಟ್ ಇಂಟರ್ನ್ಯಾಷನಲ್ ಗೆದ್ದ ಸಾನಿಯಾ ಮಿರ್ಜಾ ಜೋಡಿ - ಹೋಬರ್ಟ್ ಇಂಟರ್ನ್ಯಾಷನಲ್ ಮಹಿಳಾ ಡಬಲ್ಸ್
ಐದನೇ ಶ್ರೇಯಾಂಕಿತ ಇಂಡೋ - ಉಕ್ರೇನಿಯನ್ ಜೋಡಿ ಸಾನಿಯಾ ಮಿರ್ಜಾ ಮತ್ತು ನಾಡಿಯಾ ಕಿಚೆನೋಕ್ ಹೋಬರ್ಟ್ ಇಂಟರ್ನ್ಯಾಷನಲ್ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದೆ.
ಹೋಬರ್ಟ್ ಇಂಟರ್ನ್ಯಾಷನಲ್ ಗೆದ್ದ ಸಾನಿಯಾ ಮಿರ್ಜಾ ಜೋಡಿ
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಚೀನಾದ ಜಾಂಗ್ ಶೂಯಿ ಮತ್ತು ಪೆಂಗ್ ಶೂಯಿ ಜೊತೆ ಕಾದಾಡಿದ ಇಂಡೋ-ಉಕ್ರೇನಿಯನ್ ಜೋಡಿ, ಎದುರಾಳಿ ಆಟಗಾರರು ಮೇಲುಗೈ ಸಾಧಿಸಲು ಅವಕಾಶ ನೀಡದೇ 6-4, 6-4 ಸೆಟ್‌ಗಳಿಂದ ಸೋಲಿಸಿದೆ.
2017ರಲ್ಲಿ ಚೀನಾ ಓಪನ್ನಲ್ಲಿ ಕೊನೆಯಾದಾಗಿ ಟೆನ್ನಿಸ್ ಅಂಗಳದಲ್ಲಿ ಕಾಣಿಸಿಕೊಂಡಿದ್ದ 33 ವರ್ಷದ ಸಾನಿಯಾ ಮಿರ್ಜಾ 2 ವರ್ಷಗಳ ನಂತರ ಟೆನ್ನಿಸ್ ಅಂಗಳಕ್ಕೆ ಕಾಲಿರಿಸಿದ್ದು, ಪ್ರಶಸ್ತಿ ಗೆಲ್ಲುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ.