ಒಸ್ಟ್ರಾವ (ಜೆಕ್ ಗಣರಾಜ್ಯ): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈ ವರ್ಷದ ಮೊದಲ ಪ್ರಶಸ್ತಿ ಗೆಲ್ಲುವ ಮೂಲಕ ಮತ್ತೆ ಲಯಕ್ಕೆ ಮರಳಿದ್ದಾರೆ. ಸಾನಿಯಾ ಮಿರ್ಜಾ ತಾಯಿಯಾದ ಬಳಿಕ ಅವರು ಪಡೆದ ಎರಡನೇ ಪ್ರಶಸ್ತಿ ಇದಾಗಿದೆ.
ಸಾನಿಯಾ ಮುಡಿಗೆ ಮತ್ತೊಂದು ಗರಿ: ಒಸ್ಟ್ರಾವ ಓಪನ್ ಟೆನಿಸ್ ಮಹಿಳಾ ಡಬಲ್ಸ್ ಗೆದ್ದ ಇಂಡೋ - ಚೈನೀಸ್ ಜೋಡಿ - ಒಸ್ಟ್ರಾವ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗ
ಅಮೆರಿಕದ ಕೈಟ್ಲಿನ್ ಕ್ರಿಶ್ಚಿಯನ್ ಮತ್ತು ನ್ಯೂಜಿಲ್ಯಾಂಡ್ನ ಇರಿನ್ ರೌಟ್‌ಲಿಫ್ ಜೋಡಿಯನ್ನು 6-3, 6-2 ನೇರಸೆಟ್‌ಗಳಿಂದ ಪರಾಭವಗೊಳಿಸಿತು. 2ನೇ ಶ್ರೇಯಾಂಕಿತ ಇಂಡೋ-ಚೈನೀಸ್ ಜೋಡಿ ಒಂದು ಗಂಟೆ 4 ನಿಮಿಷಗಳ ಹೋರಾಟದಲ್ಲಿ ಗೆಲುವು ದಕ್ಕಿಸಿಕೊಂಡಿತು.
ಒಸ್ಟ್ರಾವ ಓಪನ್ ಟೆನಿಸ್ ಮಹಿಳಾ ಡಬಲ್ಸ್ ಗೆದ್ದ ಇಂಡೋ-ಚೈನೀಸ್ ಜೋಡಿ
ಒಸ್ಟ್ರಾವ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಚೀನಾದ ಶುಯಿ ಝಂಗ್ ಜತೆಗೂಡಿ ಸಾನಿಯಾ ಈ ಪ್ರಶಸ್ತಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ. 34 ವರ್ಷದ ಸಾನಿಯಾಗೆ ವೃತ್ತಿಜೀವನದ 43ನೇ ಪ್ರಶಸ್ತಿ ಗೆಲುವಾಗಿದೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಅಮೆರಿಕದ ಕೈಟ್ಲಿನ್ ಕ್ರಿಶ್ಚಿಯನ್ ಮತ್ತು ನ್ಯೂಜಿಲ್ಯಾಂಡ್ನ ಇರಿನ್ ರೌಟ್‌ಲಿಫ್ ಜೋಡಿಯನ್ನು 6-3, 6-2 ನೇರಸೆಟ್‌ಗಳಿಂದ ಪರಾಭವಗೊಳಿಸಿತು. 2ನೇ ಶ್ರೇಯಾಂಕಿತ ಇಂಡೋ-ಚೈನೀಸ್ ಜೋಡಿ ಒಂದು ಗಂಟೆ 4 ನಿಮಿಷಗಳ ಹೋರಾಟದಲ್ಲಿ ಗೆಲುವು ದಕ್ಕಿಸಿಕೊಂಡಿತು.