ಹೈದರಾಬಾದ್:ಭಾರತ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ 2 ವರ್ಷದ ಬಳಿಕ ವೃತ್ತಿಪರ ಟೆನ್ನಿಸ್ ಜಗತ್ತಿಗೆ ಮತ್ತೆ ರೀಎಂಟ್ರಿ ನೀಡಲಿದ್ದಾರೆ.
2017 ರಿಂದ ಟೆನ್ನಿಸ್ ಜಗತ್ತಿನಿಂದ ದೂರವಿರುವ ಸಾನಿಯಾ ಮಿರ್ಜಾ ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ಹೋಬರ್ಟ್ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಉಕ್ರೇನ್ ಜೊತೆಗಾರ್ತಿ ನಾಡಿಯಾ ಕಿಚೆನೋಕ್ ಜೊತೆಯಾಗಿ ಮತ್ತೆ ಟೆನ್ನಿಸ್ ಅಂಗಳಕ್ಕೆ ಕಣಕ್ಕಿಳಲಿಯಲಿದ್ದಾರೆ.
ನಾನು ಹೋಬರ್ಟ್ನಲ್ಲಿ ಆಡಲಿದ್ದೇನೆ, ನಂತರ ಆಸ್ಟ್ರೇಲಿಯನ್ ಓಪನ್ನಲ್ಲಿ ಆಡಲಿದ್ದೇನೆ. ಮುಂದಿನ ತಿಂಗಳು ಮುಂಬೈನಲ್ಲಿ ನಡೆಯುವ ಐಟಿಎಫ್ ಮಹಿಳಾ ಟೂರ್ನಿಯಲ್ಲಿ ಆಡಲು ಯೋಜನೇ ರೂಪಿಸಿಕೊಂಡಿದ್ದೇನೆ. ಆದರೆ ಈ ಟೂರ್ನಿ ಬಗ್ಗೆ ಇನ್ನೂ ನನ್ನ ನಿರ್ಧಾರ 50:50 ಇದೆ. ಆದರೆ ಹೋಬರ್ಟ್ ಹಾಗೂ ಆಸ್ಟ್ರೇಲಿಯನ್ ಓಪನ್ ಮಾತ್ರ ಪಕ್ಕ ಎಂದು ಮೂಗುತಿ ಸುಂದರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.