ಕರ್ನಾಟಕ

karnataka

ETV Bharat / sports

ಆಟದ ಮಧ್ಯೆ ಹೆಚ್ಚಾದ ಕಾಲು ನೋವು: ಆಸ್ಟ್ರೇಲಿಯಾ ಓಪನ್​ನಿಂದ ಹೊರಬಿದ್ದ ಸಾನಿಯಾ ಮಿರ್ಜಾ - ಸಾನಿಯಾ-ಕಿಚೆನೊಕ್​ ಟೆನ್ನಿಸ್​

ಎರಡು ವರ್ಷದ ಬಳಿಕ ಅಂತಾರಾಷ್ಟ್ರೀಯ ಟೆನಿಸ್​ಗೆ ಮರಳಿದ್ದ ಮೂಗುತಿ ಸುಂದರಿ ಉಕ್ರೇನ್​ನ ನಾಡಿಯಾ ಕಿಚೆನೊಕ್​ ಜೊತೆಗೂಡಿ ಹೋಬರ್ಟ್​ ಇಂಟರ್​ ನ್ಯಾಷನಲ್​ ಟೂರ್ನಿ ಗೆದ್ದಿದ್ದರು.

ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ

By

Published : Jan 23, 2020, 6:41 PM IST

ಮೆಲ್ಬೋರ್ನ್​: ಭಾರತದ ಟೆನಿಸ್​ ತಾರೆ ಆಟಗಾರ್ತಿ ಸಾನಿಯಾ ಮಿರ್ಜಾ 2020ರ ಆಸ್ಟ್ರೇಲಿಯಾ ಓಪನ್​ ಡಬಲ್ಸ್​ನಿಂದ ಹೊರಬಿದ್ದಾರೆ.

ಎರಡು ವರ್ಷದ ಬಳಿಕ ಅಂತಾರಾಷ್ಟ್ರೀಯ ಟೆನಿಸ್​​​ ಮರಳಿದ್ದ ಮೂಗುತಿ ಸುಂದರಿ ಉಕ್ರೇನ್​ನ ನಾಡಿಯಾ ಕಿಚೆನೊಕ್​ ಜೊತೆಗೂಡಿ ಹೋಬರ್ಟ್​ ಇಂಟರ್​ ನ್ಯಾಷನಲ್​ ಟೂರ್ನಿ ಗೆದ್ದಿದ್ದರು.

ಅದೇ ಹುಮ್ಮಸ್ಸಿನಲ್ಲಿ ಆಸ್ಟ್ರೇಲಿಯಾ ಓಪನ್​ ಮೇಲೆ ಕಣ್ಣಿಟ್ಟಿದ್ದ ಇಂಡೋ - ಉಕ್ರೇನ್​ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲೇ ಗಾಯದ ಸಮಸ್ಯೆ ಎದುರಾದ ಕಾರಣ ಪಂದ್ಯದಿಂದ ಹಿಂದೆ ಸರಿದರು. ಸಾನಿಯಾ ಮಿರ್ಜಾ ಕಣಕಾಲು ನೋವಿನಿಂದ ಮಿಶ್ರ ಡಬಲ್ಸ್​ನಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಮಹಿಳೆಯರ ಡಬಲ್ಸ್​ನಿಂದಲೂ ಮೊದಲ ಸುತ್ತಿನಲ್ಲೇ ಹೊರಬಿದ್ದಂತಾಗಿದೆ.

ಸಾನಿಯಾ - ಕಿಚೆನೊಕ್​ ಜೋಡಿ ಟೂರ್ನಿಯಿಂದ ಹಿಂದೆ ಸರಿಯುವ ಮುನ್ನ ಚೀನಾದ ಕ್ಷಿನ್ಯುನ್ ​ -ಲಿನ್​ ಜು ವಿರುದ್ಧ 6-2ರಲ್ಲಿ ಮೊದಲ ಸೆಟ್​ ಕೆಳೆದುಕೊಂಡಿದ್ದರು. ಎರಡನೇ ಸೆಟ್​ನಲ್ಲೂ 1-0ಯಲ್ಲಿ ಹಿನ್ನಡೆ ಅನುಭವಿಸಿದ್ದ ವೇಳೆ ಸಾನಿಯಾಗೆ ನೋವು ಉಲ್ಬಣಗೊಂಡಿದ್ದರಿಂದ ಪಂದ್ಯವನ್ನು ಬಿಟ್ಟುಕೊಡಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ.

ಸುದ್ದಿ ಏಜೆನ್ಸಿಯ ಪ್ರಕಾರ ಸಾನಿಯಾ ಅಭ್ಯಾಸ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು ಎಂದು ತಿಳಿದುಬಂದಿದೆ.

ABOUT THE AUTHOR

...view details