ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ಸಾನಿಯಾ ಮಿರ್ಜಾ ಜಿಮ್ನಲ್ಲಿ ದೇಹ ದಂಡಿಸುತ್ತಿದ್ದಾರೆ. ಈಗಾಗಲೇ ಸಾನಿಯಾ ಮಿರ್ಜಾ ನಾಲ್ಕು ತಿಂಗಳಲ್ಲಿ ಸುಮಾರು 26 ಕೆಜಿ ತೂಕ ಇಳಿಸಿದ್ದಾರೆ. ಜಿಮ್ನಲ್ಲಿ ದೇಹ ದಂಡಿಸುತ್ತಿರುವ ವಿಡಿಯೋವೊಂದನ್ನು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
4 ತಿಂಗಳಲ್ಲಿ 26 ಕೆಜಿ ಕರಗಿದ ಮುತ್ತಿನನಗರಿ ಗೊಂಬೆ; ಕದನಕ್ಕೆ ರೆಡಿಯಾಗ್ತಿದ್ದಾರೆ ಟೆನ್ನಿಸ್ ಬ್ಯೂಟಿ! - ಸಾನಿಯಾ ಮಿರ್ಜಾ ತೂಕ ಇಳಿಸಿದ ಸುದ್ದಿ
ಭಾರತ ಟೆನ್ನಿಸ್ ಕ್ರೀಡಾರಾಣಿ ಸಾನಿಯಾ ಮಿರ್ಜಾ ಮತ್ತೆ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿಯೇ ಕಸರತ್ತು ಪ್ರಾರಂಭಿಸಿದ್ದಾರೆ. ಟೆನ್ನಿಸ್ ಬ್ಯೂಟಿ ಸಾನಿಯಾ ಮಿರ್ಜಾ ತಾಯಿಯಾದ ಬಳಿಕ ತಾತ್ಕಾಲಿಕವಾಗಿ ಆಟಕ್ಕೆ ವಿರಾಮ ನೀಡಿದ್ದರು. ಈಗ ಮತ್ತೆ ರೀ ಎಂಟ್ರಿ ಕೊಡಲು ಸಾನಿಯಾ ಸಜ್ಜಾಗುತ್ತಿದ್ದಾರೆ.
ಆಗ ನನ್ನ ದೇಹದ ತೂಕ ಏರಿಕೆ ಬಗ್ಗೆ ಪ್ರಶ್ನಿಸಿದ್ದರು. ಈಗ ತೂಕ ಇಳಿಕೆ ಹೇಗೆ ಸಾಧ್ಯವಾಯ್ತು ಎಂದು ಕೇಳುತ್ತಿದ್ದಾರೆ. ನಾನು ನನ್ನ ಮಗುವಿಗೆ ಜನ್ಮ ನೀಡಿದ ಬಳಿಕ 23 ಕೆಜಿ ತೂಕ ಇಳಿಯಬೇಕೆಂದು ಗುರಿ ಹೊಂದಿದೆ. ಅದರಂತೆ ನಾನು 26 ಕೆಜಿ ಇಳಿಸಿದೆ. ಇದಕ್ಕೆ ಶ್ರಮ, ಕ್ರಮಶಿಕ್ಷಣ, ಏಕಾಗ್ರತೆ, ಬದ್ಧತೆಯಿಂದಲೇ ಸಾಧ್ಯವಾಯ್ತು. ಮಗುವಿಗೆ ಜನ್ಮ ನೀಡಿದ ಬಳಿಕ ಇಷ್ಟೊಂದು ತೂಕ ಇಳಿಸುವುದು ಸಾಮಾನ್ಯವಲ್ಲ. ದಪ್ಪಗಿರುವ ಮಹಿಳೆಯರು ಕಠಿಣ ಶ್ರಮ, ನಿರ್ದಿಷ್ಟ ಮನಸ್ಸಿನಿಂದ ವ್ಯಾಯಾಮ ಕೈಗೊಂಡ್ರೆ ಅವರು ಸಹ ತೂಕ ಇಳಿಸುತ್ತಾರೆ. ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ಜಿಮ್ನಲ್ಲಿ ಶ್ರಮವಹಿಸಿ ಬಳಿಕ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತೆ ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದ್ದಾರೆ ಸಾನಿಯಾ.
ಸಾನಿಯಾ ಕಳೆದ ವರ್ಷ ಅಕ್ಟೋಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ಇಜಾನ್ ಮಿರ್ಜಾ ಮಾಲಿಕ್ ಎಂದು ಹೆಸರಿಟ್ಟಿದ್ದಾರೆ. 2017ರಲ್ಲಿ ಸಾನಿಯಾ ಭಾರತದ ಪರ ಚೀನಾ ಓಪನ್ನಲ್ಲಿ ಕೊನೆಯಬಾರಿ ಆಡಿದ್ದರು. 2020 ಜನವರಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೆನ್ನಿಸ್ ಟೂರ್ನಿಯಲ್ಲಿ ಭಾಗಿಯಾಗಲು ಕಸರತ್ತು ನಡೆಸಿದ್ದಾರೆ.