ಕರ್ನಾಟಕ

karnataka

ETV Bharat / sports

ನಡಾಲ್ ಬೆನ್ನಲ್ಲೇ ಒಲಿಂಪಿಕ್ಸ್​ನಿಂದ ಹಿಂದೆಸರಿದ ರೋಜರ್​ ಫೆಡರರ್​ - ಟೋಕಿಯೋ ಒಲಿಂಪಿಕ್ಸ್​

ಈ ಕುರಿತು ಟ್ವೀಟ್ ಮಾಡಿರುವ ಫೆಡರರ್​, ಗ್ರಾಸ್​ ಆವೃತ್ತಿಯಲ್ಲಿ ಆಡುವಾಗ ದುರಾದೃಷ್ಟವಶಾತ್​ ಮಂಡಿ ನೋವು ಮತ್ತೆ ಕಾಣಿಸಿಕೊಂಡಿದೆ. ಹಾಗಾಗಿ ನಾನು ಟೋಕಿಯೋ ಒಲಿಂಪಿಕ್ ಗೇಮ್​ನಿಂದ ಅನಿವಾರ್ಯವಾಗಿ ಹಿಂದಿ ಸರಿಯಲು ಒಪ್ಪಿಕೊಳ್ಳಬೇಕಿದೆ ಎಂದು ಬರೆದುಕೊಂಡಿದ್ದಾರೆ.

ರೋಜರ್ ಫೆಡರರ್​
ರೋಜರ್ ಫೆಡರರ್​

By

Published : Jul 13, 2021, 10:38 PM IST

ನವದೆಹಲಿ: ಸ್ವಿಟ್ಜರ್​ಲೆಂಡ್​ನ ಟೆನಿಸ್​ ತಾರೆ ರೋಜರ್​ ಫೆಡರರ್​ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ. ಗಾಯದ ಕಾರಣ ತಾವೂ ಮಹಾ ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿರುವುದಾಗಿ ಮಂಗಳವಾರ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಫೆಡರರ್​, ಗ್ರಾಸ್​ ಆವೃತ್ತಿಯಲ್ಲಿ ಆಡುವಾಗ ದುರಾದೃಷ್ಟವಶಾತ್​ ಮಂಡಿ ನೋವು ಮತ್ತೆ ಕಾಣಿಸಿಕೊಂಡಿದೆ. ಹಾಗಾಗಿ ನಾನು ಟೋಕಿಯೋ ಒಲಿಂಪಿಕ್ ಗೇಮ್​ನಿಂದ ಅನಿವಾರ್ಯವಾಗಿ ಹಿಂದಿ ಸರಿಯಲು ಒಪ್ಪಿಕೊಳ್ಳಬೇಕಿದೆ ಎಂದು ಬರೆದುಕೊಂಡಿದ್ದಾರೆ.

20 ಗ್ರ್ಯಾಂಡ್​ ಸ್ಲಾಮ್ ವಿಜೇತ ಹಲವು ಮಂಡಿ ಶಸ್ತ್ರಚಿಕಿತ್ಸೆಯ ನಂತರ 2020ರ ಆವೃತ್ತಿಯನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡಿದ್ದರು. ದೋಹಾ ಓಪನ್ ಮೂಲಕ ಟೆನಿಸ್​ಗೆ ಮರಳಿದರಾದರೂ ಎರಡನೇ ಸುತ್ತಿನಲ್ಲಿ ಸೋಲು ಕಂಡು ಹೊರಬಿದ್ದಿದ್ದರು. ನಂತರ ಜೆನಿವಾ ಓಪನ್​ನಲ್ಲಿ ಮೊದಲ ಸುತ್ತಿನಲ್ಲಿ ಹೊರಬಂದರೆ, ಫ್ರೆಂಚ್​ ಓಪನ್​ನಲ್ಲಿ ಮೂರು ಸುತ್ತಿನ ಗೆಲುವಿನ ಬಳಿಕ ವಿಂಬಲ್ಡನ್​ನಲ್ಲಿ ಆಡವುದಕ್ಕಾಗಿ ತಾವೂ ಕ್ಲೇ ಕೋರ್ಟ್​ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು.

39 ವರ್ಷದ ಸ್ವಿಸ್​ ಸ್ಟಾರ್​ ವಿಂಬಲ್ಡನ್ ಕ್ವಾರ್ಟರ್​ ಫೈನಲ್​​ನಲ್ಲಿ ಪೋಲೆಂಡ್​ನ ಹ್ಯೂಬರ್ಟ್​ ಹರ್ಕಜ್ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದ್ದರು.

ಇನ್ನು ಇದಕ್ಕೂ ಮೊದಲು ಸ್ಪೇನ್​ನ ರಾಫೆಲ್ ನಡಾಲ್ ಕೂಡ ವೈಯಕ್ತಿಕ ಕಾರಣ ನೀಡಿ ಟೋಕಿಯೋದಿಂದ ಹಿಂದೆ ಸರಿದರೆ, ಮಹಿಲಾ ಲೆಜೆಂಡ್​ ಸೆರೆನಾ ವಿಲಿಯಮ್ಸ್​ ಯಾವುದೇ ನಿರ್ದಿಷ್ಟ ಕಾರಣ ಹೇಳದೆ ಒಲಿಂಪಿಕ್ಸ್​ ಗೇಮ್ಸ್​ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ - ವಿಂಬಲ್ಡನ್ ಚಾಂಪಿಯನ್​ಶಿಪ್​ ಆಡದಿರಲು ರಾಫೆಲ್ ನಡಾಲ್ ನಿರ್ಧಾರ

ABOUT THE AUTHOR

...view details