ಬಾಸೆಲ್:ಟೆನ್ನಿಸ್ ಜಗತ್ತಿನ ದಂತ ಕತೆಯಾಗಿರುವ ಸ್ವಿಟ್ಜರ್ಲ್ಯಾಂಡ್ನ ರೋಜರ್ ಫೆಡರರ್ 10ನೇ ಬಾರಿ ಸ್ವಿಸ್ ಓಪನ್ ಗೆದ್ದು ದಾಖಲೆ ಬರೆದಿದ್ದಾರೆ.
ಭಾನುವಾರ ನಡೆದ ಸ್ವಿಸ್ ಓಪನ್ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಅವರನ್ನು 6-2 6-2ರಲ್ಲಿ ಮಣಿಸುವ ಮೂಲಕ ವೃತ್ತಿ ಬದುಕಿನಲ್ಲಿ 10 ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 38 ವರ್ಷದ ಫೆಡೆರರ್ ಪ್ರಸ್ತುತ ವರ್ಷದಲ್ಲಿ 4 ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದ 20 ವರ್ಷದ ಅಲೆಕ್ಸ್ರನ್ನು ಏಕಪಕ್ಷೀಯವಾಗಿ ನೇರಸೆಟ್ಗಳಲ್ಲಿ ಮಣಿಸುವ ಮೂಲಕ ಪ್ರಾಬಲ್ಯ ಸಾಧಿಸಿದ್ದಾರೆ.