ನ್ಯೂಯಾರ್ಕ್: ಸ್ಪೇನ್ನ ಸ್ಟಾರ್ ಟೆನ್ನಿಸ್ ಪ್ಲೇಯರ್ ರಾಫೆಲ್ ನಡಾಲ್ ಯುಎಸ್ ಓಪನ್ನಲ್ಲಿ ಫೈನಲ್ ಪ್ರವೇಶಿಸಿದ್ದು, ವೃತ್ತಿ ಜೀವನದ 19ನೇ ಗ್ರ್ಯಾಂಡ್ಸ್ಲಾಮ್ ನಿರೀಕ್ಷೆಯಲ್ಲಿದ್ದಾರೆ.
2019ರ ಫ್ರೆಂಚ್ ಓಪನ್ ಜಯಿಸಿದ್ದ ನಡಾಲ್ ನಂತರ ವಿಂಬಲ್ಡನ್ ಓಪನ್ನಲ್ಲಿ ರೋಜರ್ ಫೆಡೆರರ್ ವಿರುದ್ಧ ಸೋಲನುಭವಿಸಿ ನಿರಾಶೆಯನುಭವಿಸಿದ್ದರು. ಆಸ್ಟ್ರೇಲಿಯಾ ಓಪನ್ನಲ್ಲಿ ರನ್ನರ್ ಆಪ್ಗೆ ತೃಪ್ತಿ ಪಟ್ಟುಕೊಂಡಿದ್ದರು. ಇದೀಗ 2019ರ ಗ್ರ್ಯಾಂಡ್ಸ್ಲಾಮ್ನಲ್ಲಿ 3ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.
ಅಮೆರಿಕ ಓಪನ್ನಲ್ಲಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿರುವ ನಡಾಲ್, ಪ್ರಶಸ್ತಿಗಾಗಿ ರಷ್ಯನ್ ಟೆನ್ನಿಸ್ ಸ್ಟಾರ್ ಡೇನಿಯಲ್ ಮದ್ವದೇವ್ ಅವರನ್ನು ಸೋಮವಾರ ಎದುರಿಸಲಿದ್ದಾರೆ. ಮದ್ವದೇವ್ಗೆ ಇದು ಮೊದಲ ಯುಎಸ್ ಓಪನ್ ಫೈನಲ್ ಆಗಿದೆ.