ಕರ್ನಾಟಕ

karnataka

ETV Bharat / sports

ಮೆಡ್ವೆಡೆವ್ ಕೆಚ್ಚೆದೆಯ ಹೋರಾಟ ವ್ಯರ್ಥ... ನಡಾಲ್ ಮುಡಿಗೆ ಯುಎಸ್​ ಓಪನ್ - ಗ್ರಾಂಡ್​ಸ್ಲ್ಯಾಮ್​

ಹನ್ನೆರಡು ಫ್ರೆಂಚ್ ಓಪನ್, ಎರಡು ವಿಂಬಲ್ಡನ್, ನಾಲ್ಕು ಯುಎಸ್ ಓಪನ್ ಹಾಗೂ ಒಂದು ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ನಡಾಲ್ ಇನ್ನೊಂದು ಗ್ರಾಂಡ್​ಸ್ಲ್ಯಾಮ್​ ಗೆದ್ದಲ್ಲಿ ಫೆಡರರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ರಫೆಲ್ ನಡಾಲ್

By

Published : Sep 9, 2019, 8:00 AM IST

ನ್ಯೂಯಾರ್ಕ್: ರೋಚಕ ಹಣಾಹಣಿಯಿಂದ ಕೂಡಿದ್ದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಈ ಮೂಲಕ ನಡಾಲ್​​ 19ನೇ ಗ್ರ್ಯಾಂಡ್​​ಸ್ಲ್ಯಾಮ್​ ಗೆದ್ದುಬೀಗಿದ್ದಾರೆ.

ಟೆನಿಸ್ ಲೋಕದ ದಿಗ್ಗಜ ತಾರೆ ರೋಜರ್ ಫೆಡರರ್ ಸೋಲಿಸಿ ಫೈನಲ್ ಪ್ರವೇಶಿಸಿದ್ದ ಡ್ಯಾನಿಲ್ ಮೆಡ್ವೆಡೆವ್ ಉಪಾಂತ್ಯ ಪಂದ್ಯದಲ್ಲಿ ನಡಾಲ್​ಗೆ ಮುಖಾಮುಖಿಯಾಗಿದ್ದರು. 7-5, 6-3, 5-7, 4-6, 6-4 ಸೆಟ್​ಗಳ ಮೂಲಕ ನಡಾಲ್ ನಾಲ್ಕನೇ ಬಾರಿಗೆ ಯುಎಸ್​ ಓಪನ್​ ಗೆದ್ದಿದ್ದಾರೆ.

ಆರಂಭದ ಎರಡು ಸೆಟ್ ಗೆದ್ದು ನಡಾಲ್​ ಮುನ್ನಡೆ ಸಾಧಿಸಿದ್ದರು. ಮೂರು ಹಾಗೂ ನಾಲ್ಕನೇ ಸೆಟ್​ ಮೆಡ್ವೆಡೆವ್ ಪಾಲಾಯಿತು. ರೋಚಕವಾಗಿ ಸಾಗಿದ ಪಂದ್ಯದಲ್ಲಿ ಐದನೇ ಸೆಟ್ ನಡಾಲ್ ಗೆಲ್ಲೋ ಮೂಲಕ ನಾಲ್ಕನೇ ಯುಎಸ್ ಓಪನ್ ತಮ್ಮದಾಗಿಸಿಕೊಂಡರು.

12 ಫ್ರೆಂಚ್ ಓಪನ್, ಎರಡು ವಿಂಬಲ್ಡನ್, ನಾಲ್ಕು ಯುಎಸ್ ಓಪನ್ ಹಾಗೂ ಒಂದು ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ನಡಾಲ್ ಇನ್ನೊಂದು ಗ್ರಾಂಡ್​ಸ್ಲ್ಯಾಮ್​ ಗೆದ್ದಲ್ಲಿ ಫೆಡರರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ABOUT THE AUTHOR

...view details