ಪ್ಯಾರಿಸ್: ಫ್ರೆಂಚ್ ಓಪನ್ ಫೈನಲ್ನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಮಣಿಸುವ ಮೂಲಕ ರಾಫೆಲ್ ನಡಾಲ್ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಗ್ರ್ಯಾಂಡ್ಸ್ಲಾಮ್ ಗೆದ್ದ ವಿಶ್ವದಾಖಲೆಯನ್ನು ಸ್ವಿಸ್ ಆಟಗಾರ ರೋಜರ್ ಫೆಡರರ್ ಜೊತೆ ಹಂಚಿಕೊಂಡಿದ್ದಾರೆ.
ರೋಲೆಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನಿನ ನಡಾಲ್ 6-0,6-2, 7-5 ಸೆಟ್ಗಳ ಅಂತರದಲ್ಲಿ ಸರ್ಬಿಯನ್ ಆಟಗಾರನಿಗೆ ಸೋಲುಣಿಸಿದರು. ಈ ಮೂಲಕ ಮಣ್ಣಿನ ಮೈದಾನದಲ್ಲಿ ತಾವೇ ರಾಜ ಎಂದು ನಿರೂಪಿಸಿದರು.
ಈಗಾಗಲೆ ಫ್ರೆಂಚ್ ಓಪನ್ಅನ್ನು ಅತಿಹೆಚ್ಚು ಬಾರಿ ಗೆದ್ದಿರುವ ದಾಖಲೆ ಹೊಂದಿರುವ ನಡಾಲ್, ಆ ದಾಖಲೆಯನ್ನು 13ಕ್ಕೇ ಏರಿಸಿಕೊಂಡರು. ಅಲ್ಲದೆ ಫ್ರೆಂಚ್ ಓಪನ್ನಲ್ಲಿ ಫೈನಲ್ ಪ್ರವೇಶಿಸಿದ ಎಲ್ಲಾ ಬಾರಿಯೂ ಗೆದ್ದ ಸಾಧನೆಗೂ ಪಾತ್ರರಾದರು.