ಮೆಲ್ಬೋರ್ನ್: ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ನಲ್ಲಿ ಪಾಲ್ಗೊಳ್ಳಬೇಕಾದರೆ ಎಲ್ಲಾ ಟೆನಿಸ್ ಆಟಗಾರರು ಕೋವಿಡ್-19 ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಒಂದು ವೇಳೆ ತೆಗೆದುಕೊಳ್ಳದಿದ್ದರೆ ಅಂತಹ ಯಾರೇ ಆದರೂ ಆಸ್ಟ್ರೇಲಿಯಾ ಪ್ರವೇಶಿಸಲು ವೀಸಾ ದೊರೆಯುವುದಿಲ್ಲ ಎಂದು ಮೆಲ್ಬೋರ್ನ್ನ ರಾಜಕೀಯ ನಾಯಕರೊಬ್ಬರು ಹೇಳಿದ್ದಾರೆ.
ವಿಕ್ಟೋರಿಯಾದ ರಾಜ್ಯ ಸರ್ಕಾರದ ಮಂತ್ರಿ ಡೇನಿಯಲ್ ಆ್ಯಂಡ್ರಿವ್ಸ್ ಎಲ್ಲಾ ವೃತ್ತಿಪರ ಕ್ರೀಡಾಪಟುಗಳು ಡೊಮೆಸ್ಟಿಕ್ಸ್ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾದರೆ ಲಿಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕೆಂದು ಘೋಷಣೆ ಮಾಡಿದ್ದಾರೆ. ಮಂಗಳವಾರ ಆ ನಿಯಮವನ್ನು ದೇಶಕ್ಕೆ ಆಗಮಿಸುವ ಎಲ್ಲಾ ವಿದೇಶಿ ಕ್ರೀಡಾಪಟುಗಳಿಗೂ ಕಡ್ಡಾಯ ಮಾಡಿ ಘೋಷಣೆ ಮಾಡಿದ್ದಾರೆ.
ಯಾವುದೇ ದೇಶದ ಟೆನಿಸ್ ಆಟಗಾರರು ವ್ಯಾಕ್ಸಿನ್ ಪಡೆದಿಲ್ಲದಿದ್ದರೆ ದೇಶಕ್ಕೆ ಆಗಮಿಸಲು ವೀಸಾ ಪಡೆಯುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಒಂದೇ ವೇಳೆ ಅವರೂ ವೀಸಾ ಪಡೆದದ್ದೇ ಆದರೆ ಎರಡು ವಾರಗಳ ಹೋಟೆಲ್ ಕ್ವಾರಂಟೈನ್ ಮಾಡಬೇಕಾಗುತ್ತದೆ. ವ್ಯಾಕ್ಸಿನ್ ಪಡೆದವರಿಗೆ ಯಾವುದೇ ಕ್ವಾರಂಟೈನ್ ಇರುವುದಿಲ್ಲ ಎಂದು ಆ್ಯಂಡ್ರಿವ್ಸ್ ಹೇಳಿದ್ದಾರೆ.
ಆದರೆ, ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ನೊವಾಕ್ ಜೋಕೊವಿಕ್ ಮಾತ್ರ ಲಸಿಕೆ ಪಡೆಯುವುದು ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಆದರೆ, ಇಂಗ್ಲೆಂಡ್ ಸ್ಟಾರ್ ಆ್ಯಂಡಿ ಮರ್ರೆ ವ್ಯಾಕ್ಸಿನ್ ಕಡ್ಡಾಯಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದಾಖಲೆಯ 21ನೇ ಗ್ರ್ಯಾಂಡ್ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಜೋಕೊವಿಕ್ ಆಸ್ಟ್ರೇಲಿಯಾ ಓಪನ್ಗೂ ಮುನ್ನ ಕೋವಿಡ್ ಲಸಿಕೆ ಪಡೆಯಲಿದ್ದಾರೆಯೇ ಎಂದು ಕಾದುನೋಡಬೇಕಿದೆ.
ಇದನ್ನು ಓದಿ:Dhoni ಇಲ್ಲದೆ, CSK ಇಲ್ಲ.. ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್