ಕ್ಯಾರಿ(ಯುಎಸ್):ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅಟ್ಲಾಂಟಿಕ್ ಟೈರ್ ಚಾಂಪಿಯನ್ಶಿಪ್ನ ಸೆಮಿಫೈನಲ್ನಲ್ಲಿ ವಾಕ್ ಓವರ್ ಪಡೆದು ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ರಾತ್ರಿ ಗುಣೇಶ್ವರನ್ ಡೆನ್ಮಾರ್ಕ್ನ ಮೈಕಲ್ ಟಾರ್ಪೆಗಾರ್ಡ್ ವಿರುದ್ಧ ಸೆಮಿಫೈನಲ್ ಪಂದ್ಯವಾಡಬೇಕಿತ್ತು. ಆದರೆ, ಟಾರ್ಪೆಗಾರ್ಡ್ ಆಡದ ಕಾರಣ ವಾಕ್ಓವರ್ ಪಡೆದು ಸುಲಭವಾಗಿ ಫೈನಲ್ ಪ್ರವೇಶಿಸಿದ್ದಾರೆ.