ಕರ್ನಾಟಕ

karnataka

ETV Bharat / sports

ಅಟ್ಲಾಂಟಿಕ್ ಟೈರ್ ಚಾಂಪಿಯನ್‌ಶಿಪ್ ಸೆಮಿಫೈನಲ್​ಗೆ ಪ್ರಜ್ಞೇಶ್ ಗುಣೇಶ್ವರನ್​ - ಭಾರತದ ಟೆನ್ನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್

ಭಾರತೀಯ ಆಟಗಾರ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮೈಕೆಲ್ ಟಾರ್ಪೆಗಾರ್ಡ್ ಅವರನ್ನು ಎದುರಿಸಲಿದ್ದಾರೆ.

ಪ್ರಜ್ಞೇಶ್ ಗುಣೇಶ್ವರನ್​
ಪ್ರಜ್ಞೇಶ್ ಗುಣೇಶ್ವರನ್​

By

Published : Nov 14, 2020, 6:41 PM IST

ನಾರ್ತ್​ ಕರೋಲಿನ: ಭಾರತದ ಟೆನ್ನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್​ ಅಟ್ಲಾಂಟಿಕ್ ಟೈನ್​ ಚಾಂಪಿಯನ್​ಶಿಪ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಎಟಿಪಿ ಚಾಲೆಂಜರ್ಸ್​ ಭಾಗವಾಗಿರುವ ಈ ಟೂರ್ನಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಣೇಶ್ವರನ್,​ ಬ್ರೆಜಿಲ್​ನ ಥಾಮಸ್​ ಬೆಲುಸಿ ಅವರನ್ನು 3-6, 7-5, 7-6ರ ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

146ನೇ ಶ್ರೇಯಾಂಕದ ಗುಣೇಶ್ವರನ್​ ಮೊದಲ ಸೆಟ್​ನಲ್ಲಿ ಯಾವುದೇ ಪ್ರತಿರೋಧವಿಲ್ಲದೆ ಸೋಲೊಪ್ಪಿಕೊಂಡರು. ಆದರೆ ನಂತರದ ಎರಡು ಸೆಟ್​ಗಳಲ್ಲಿ ಅದ್ಭುತವಾಗಿ ತಿರುಗಿಬಿದ್ದು ಮೂರು ಸೆಟ್​ಗಳ ಪಂದ್ಯವನ್ನು ಗೆದ್ದುಕೊಂಡರು.

ಎದುರಾಳಿ ವಿರುದ್ಧ ಗಳಿಸಿಕೊಂಡ 17 ಪಾಯಿಂಟ್ಸ್​ಗಳಲ್ಲಿ 5 ಬ್ರೇಕಿಂಗ್ ಪಾಯಿಂಟ್ ಒಳಗೊಂಡಿತ್ತು. ಸರ್ವೀಸ್​ನಲ್ಲಿ ಗುಣೇಶ್ವರನ್​ ಶೇ. 66 ಅಂಕ ಪಡೆದರೆ, ಇವರ ಎದುರಾಳಿ ಇವರಿಗಿಂತ ಉತ್ತಮ ಪ್ರದರ್ಶನ ತೋರಿ ಶೇ. 67 ಅಂಕ ಗಳಿಸಿದ್ದರು. ಆದರೂ ಕೊನೆಯ ಸೆಟ್​ನಲ್ಲಿ ಒತ್ತಡವನ್ನು ಮೆಟ್ಟಿ ನಿಂತು ಗೆಲ್ಲುವ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು.

ಭಾರತೀಯ ಆಟಗಾರ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮೈಕೆಲ್ ಟಾರ್ಪೆಗಾರ್ಡ್ ಅವರನ್ನು ಎದುರಿಸಲಿದ್ದಾರೆ.

ABOUT THE AUTHOR

...view details