ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ಓಪನ್​: ಮೆಲ್ಬೋರ್ನ್​ ತಲುಪಿದ ಕ್ರೀಡಾಪಟುಗಳು - ವಿಕ್ಟೋರಿಯಾ ಅಜರೆಂಕಾ ಸುದ್ದಿ

ಗ್ರ್ಯಾಂಡ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್‌ ಟೆನ್ನಿಸ್​ ಟೂರ್ನಿ ಫೆಬ್ರವರಿ 8ರಿಂದ ಪ್ರಾರಂಭವಾಗಲಿದ್ದು, ಆಟಗಾರರು ಮತ್ತು ಅಧಿಕಾರಿಗಳು 15 ಚಾರ್ಟರ್ಡ್ ವಿಮಾನಗಳಲ್ಲಿ ಮೆಲ್ಬೋರ್ನ್​ಗೆ ಆಗಮಿಸಿದ್ದಾರೆ.

AUSTRALIA OPEN
ಆಸ್ಟ್ರೇಲಿಯಾ ಓಪನ್

By

Published : Jan 15, 2021, 1:29 PM IST

ಮೆಲ್ಬೋರ್ನ್: ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್‌ ಟೆನಿಸ್​ ಟೂರ್ನಿ ಹಿನ್ನೆಲೆಯಲ್ಲಿ ಆಟಗಾರರು ಮತ್ತು ಅಧಿಕಾರಿಗಳು 15 ಚಾರ್ಟರ್ಡ್ ವಿಮಾನಗಳಲ್ಲಿ ಮೆಲ್ಬೋರ್ನ್​ಗೆ ತೆರಳಿದ್ದಾರೆ. ಇನ್ನು ಎರಡು ಬಾರಿ ಚಾಂಪಿಯನ್ ಪಟ್ಟ ಪಡೆದ ವಿಕ್ಟೋರಿಯಾ ಅಜರೆಂಕಾ ಅವರು ಮೊದಲು ಆಗಮಿಸಿದ್ದಾರೆ.

ಇನ್ನು ಕೊರೊನಾ ಮಾರ್ಗಸೂಚಿ ಪ್ರಕಾರ, ಪ್ರತೀ ಆಟಗಾರರು 14 ದಿನಗಳ ಕಾಲ ಕ್ವಾರೆಂಟೈನ್​ನಲ್ಲಿರಬೇಕು. ಆದಾಗ್ಯೂ ಆಟಗಾರರು ಮೆಲ್ಬೋರ್ನ್ ತಲುಪಿದ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಫೆಬ್ರವರಿ 8ರಿಂದ ಪ್ರಾರಂಭವಾಗಲಿದೆ. ಸ್ಟಾನ್ ವಾವ್ರಿಂಕಾ ಅವರು ತಮ್ಮ ಫೋಟೋವನ್ನು ಇತರ ಇಬ್ಬರು ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆ.

ಎರಡು ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಲೀನಾ ಸ್ವಿಟೋಲಿನಾ, ಮೆಲ್ಬೋರ್ನ್‌ನ ಹೋಟೆಲ್ ಸೂಟ್‌ನ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಸುಮಾರು 1200 ಆಟಗಾರರು, ತರಬೇತುದಾರರು ಮತ್ತು ಅಧಿಕಾರಿಗಳ ಮೊದಲ ಬ್ಯಾಚ್ ಗುರುವಾರ ರಾತ್ರಿ ಆಗಮಿಸಿದೆ.

ವಿಮಾನ ನಿಲ್ದಾಣದಿಂದ ಆಟಗಾರರು ಹೋಟೆಲ್‌ಗೆ ತೆರಳಿದ್ದು, ಅಲ್ಲಿ ಕ್ವಾರೆಂಟೈನ್​ ಆಗಿದ್ದಾರೆ. ಇನ್ನು ಐದು ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆದ ಆ್ಯಂಡಿ ಮುರ್ರೆ ಈ ಬಾರಿ ಆಟ ಆಡುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details