ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯ ಓಪನ್​: 2ನೇ ಸುತ್ತಿಗೆ ಲಿಯಾಂಡರ್​ ಪೇಸ್,​ ಕ್ವಾರ್ಟರ್​ಗೆ ಬೋಪಣ್ಣ ಜೋಡಿ - 2ನೇ ಸುತ್ತಿಗೆ ಲಿಯಾಂಡರ್​ ಪೇಸ್- ಕಿಚೆನೊಕ್​

46 ವರ್ಷ ವಯಸ್ಸಿನಲ್ಲಿ ಉಮ್ಮಸ್ಸು ಕಳೆದುಕೊಳ್ಳದ ಪೇಸ್​ ಲತ್ವಿಯಾದ  ಜಲೇನಾ ಒಸ್ತಾಪೆಂಕೊ ಜೊತೆಗೂಡಿ ಮೊದಲ ಸುತ್ತಿನ ಪಂದ್ಯದಲ್ಲಿ ಅತಿಥೇಯ ರಾಷ್ಟ್ರದ ಸ್ಟಾರ್ಮ್​ ಸ್ಯಾಂಡರ್ಸ್​ ಮತ್ತು ಮಾರ್ಕ್​ ಪೊಲ್ಮಾನ್ಸ್​ ವಿರುದ್ಧ 6-7,6-3,10-6ರಲ್ಲಿ ಅಂತರದಲ್ಲಿ ಗೆದ್ದು ಬೀಗಿದರು.

Paes in mixed doubles second round
Paes in mixed doubles second round

By

Published : Jan 27, 2020, 5:28 AM IST

ಮೆಲ್ಬೋರ್ನ್​:ಭಾರತದ ಸ್ಟಾರ್​ ಟೆನ್ನಿಸ್​ ಆಟಗಾರ ಲಿಯಾಂಡರ್​ ಪೇಸ್​ ಆಸ್ಟ್ರೇಲಿಯಾ ಓಪನ್​ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

46 ವರ್ಷ ವಯಸ್ಸಿನಲ್ಲಿ ಉಮ್ಮಸ್ಸು ಕಳೆದುಕೊಳ್ಳದ ಪೇಸ್​ ಲತ್ವಿಯಾದ ಜಲೇನಾ ಒಸ್ತಾಪೆಂಕೊ ಜೊತೆಗೂಡಿ ಮೊದಲ ಸುತ್ತಿನ ಪಂದ್ಯದಲ್ಲಿ ಅತಿಥೇಯ ರಾಷ್ಟ್ರದ ಸ್ಟಾರ್ಮ್​ ಸ್ಯಾಂಡರ್ಸ್​ ಮತ್ತು ಮಾರ್ಕ್​ ಪೊಲ್ಮಾನ್ಸ್​ ವಿರುದ್ಧ 6-7,6-3,10-6ರಲ್ಲಿ ಅಂತರದಲ್ಲಿ ಗೆದ್ದು ಬೀಗಿದರು.

18 ಡಬಲ್ಸ್​ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಜಯಸಿರುವ ಲಿಯಾಂಡರ್​ ಪೇಸ್​ ಮೊದಲ ಸೆಟ್​ನಲ್ಲಿ ಕಹಿ ಅನುಭವಿಸಿದರೂ ಮುಂದಿನ ಎರಡು ಸೆಟ್​ಗಳ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿ ಎರಡನೇ ಸುತ್ತಿಗೆ ಪ್ರವೇಶ ಪಡೆದರು.

ಇನ್ನು ಭಾರತದ ಮತ್ತೊಬ್ಬ ಆಟಗಾರ ರೋಹನ್​ ಬೋಪಣ್ಣ ಕೂಡ ಮಿಕ್ಸಡ್ ಡಬಲ್ಸ್​ನಲ್ಲಿ ನಾಡಿಯಾ ಕಿಚೆನೊಕ್​ ಜೊತೆಗೂಡಿ ಎರಡನೇ ಸುತ್ತಿನ ಪಂದ್ಯದಲ್ಲಿ ನಿಕೋಲ್​ ಮೆಲಿಕರ್​ ಮತ್ತು ಬ್ರೂನೊ ಸೊವಾರೆಸ್​ ಜೋಡಿಯನ್ನು 6-4, 7-6)4)ರಲ್ಲಿ ಅಂತರದಲ್ಲಿ ಮಣಿಸಿ ತೃತೀಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ABOUT THE AUTHOR

...view details