ಲಂಡನ್ :20 ಗ್ರ್ಯಾಂಡ್ ಸ್ಲಾಮ್ಗಳ ವಿಜೇತ ಜೋಕೊವಿಕ್ ಸೋಮವಾರ ಎಟಿಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನಿಯಾಗಿ 350ನೇ ವಾರ ಪೂರೈಸಿದ್ದಾರೆ. ಈಗಾಗಲೇ ಅತಿ ಹೆಚ್ಚು ವಾರ ಅಗ್ರಸ್ಥಾನದಲ್ಲಿ ಕಳೆದಿರುವ ಪುರುಷ ಟೆನಿಸ್ ಆಟಗಾರ ಎನಿಸಿಕೊಂಡಿರುವ ಅವರು, ತಮ್ಮ ದಾಖಲೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ 2020 ಫೆಬ್ರವರಿ 3ರಂದು ಸರ್ಬಿಯನ್ ಸ್ಟಾರ್ ಅಗ್ರಸ್ಥಾನವನ್ನು ಅಲಂಕರಿಸಿದ್ದರು. ಈ ವರ್ಷ ಮಾರ್ಚ್ 8ರಂದು ರೋಜರ್ ಫೆಡರರ್ ಹೆಸರಿನಲ್ಲಿನಲ್ಲಿದ್ದ (310 ವಾರ) ದಾಖಲೆಯನ್ನು ಮುರಿದು 1973ರಲ್ಲಿ ಎಟಿಪಿ ಶ್ರೇಯಾಂಕ ಆರಂಭಗೊಂಡ ನಂತರ ಅತಿ ಹೆಚ್ಚು ವಾರ ಅಗ್ರಸ್ಥಾನ ಪಡೆದ ಪ್ಲೇಯರ್ ಎನಿಸಿದ್ದರು.
ಜೋಕೊವಿಕ್ ಈಗಾಗಲೇ ವರ್ಷದ ಕೊನೆಯಲ್ಲಿ 7 ಬಾರಿ ಅಗ್ರಸ್ಥಾನದಲ್ಲಿ ಕೊನೆಗೊಳಿಸುವ ಮೂಲಕ ಅಮೆರಿಕಾದ ಲೆಜೆಂಡರಿ ಆಟಗಾರ ಪೇಟ್ ಸ್ಯಾಂಪ್ರಾಸ್(6) ಅವರ ದಾಖಲೆಯನ್ನು ಹಿಂದಿಕ್ಕಿದ್ದರು. ಇದೀಗ ಆ ದಾಖಲೆ ಕೂಡ 8ಕ್ಕೆ ಏರಿಕೆಯಾಗಲಿದೆ.