ಕರ್ನಾಟಕ

karnataka

ETV Bharat / sports

ಫ್ರೆಂಚ್​ ಓಪನ್‌ನಲ್ಲಿ ಜಾಕೋವಿಕ್​ಗೆ ಆಘಾತ: ಫೈನಲ್‌ನಲ್ಲಿ ಥೈಮ್ v/s ನಡಾಲ್‌  ​ - undefined

ಫ್ರೆಂಚ್​ ಓಪನ್​ ಸೆಮಿಫೈನಲ್​ ಪಂದ್ಯದಲ್ಲಿ ವಿಶ್ವ ನಂಬರ್​ 1 ಜಾಕೋವಿಕ್​ಗೆ ಜರ್ಮನ್​ ಆಟಗಾರ ಡೊಮಿನಿಕ್​ ಥೈಮ್ ಸೋಲುಣಿಸಿದ್ದಾರೆ.

ಜಾಕೋವಿಕ್​ಗೆ ಆಘಾತ ನೀಡಿ ಫೈನಲ್​ಗೆ ಎಂಟ್ರಿಕೊಟ್ಟ ಥೈಮ್​

By

Published : Jun 8, 2019, 11:45 PM IST

ಪ್ಯಾರೀಸ್​: ಫ್ರೆಂಚ್​ ಓಪನ್​ ಸೆಮಿಫೈನಲ್​​ನಲ್ಲಿ ಟೆನ್ನಿಸ್​ ಲೋಕದಲ್ಲಿ ನಂಬರ್​ ಒನ್​ ಆಟಗಾರನಾಗಿ ಮೆರೆಯುತ್ತಿದ್ದ ಜಾಕೋವಿಕ್​ಗೆ ಆಸ್ಟ್ರಿಯಾದ 25 ವರ್ಷದ ಡೊಮಿನಿಕ್​ ಥೈಮ್​ ಸೋಲುಣಿಸಿದ್ದಾರೆ.

ಇಂದು ನಡೆದ ಸೆಮಿಫೈನಲ್​ನಲ್ಲಿ ಸರ್ಬಿಯಾದ ನುವಾಕ್​ ಜಾಕೋವಿಕ್​ರನ್ನು ಥೈಮ್ 6-2, 3-6, 7-5, 5-7,7-5 ಸೆಟ್‌ಗಳಿಂದ ಸೋಲುಣಿಸಿ ಫೈನಲ್​ ಪ್ರವೇಶಿಸಿದ್ದಾರೆ.

ಸುದೀರ್ಘವಾಗಿ ನಡೆದ ಈ ಪಂದ್ಯದಲ್ಲಿ ಗೆಲುವಿಗಾಗಿ ಇಬ್ಬರು ಆಟಗಾರರು ಪ್ರಬಲ ಪೈಪೋಟಿ ನಡೆಸಿದರು. ಮೊದಲ ಸೆಟ್​ ಸುಲಭವಾಗಿ ಗೆದ್ದ ಥೈಮ್​ 2ನೇ ಸೆಟ್​ನಲ್ಲಿ ಸೋಲು ಕಂಡರು. ನಂತರ ಸೆಟ್​ನಲ್ಲಿ 7-5ರಲ್ಲಿ ಗೆಲುವು ಸಾಧಿಸಿದರು. ಆದರೆ ಮತ್ತೆ 4ನೇ ಸೆಟ್​ನಲ್ಲಿ ತಿರುಗಿದ್ದ ಜಾಕೋವಿಕ್​ 7-5ರಲ್ಲಿ ಗೆದ್ದರು. ಆದರೆ ಕೊನೆಯ ಸೆಟ್​ನಲ್ಲಿ 7-5 ಅಂಕಗಳಿಂದ ಗೆಲುವು ಸಾಧಿಸಿದ ಥೈಮ್​ ಫೈನಲ್​ ಪ್ರವೇಶಿಸಿದರು.

ಡೊಮಿನಿಕ್​ ಥೈಮ್​ ನಾಳೆ ನಡೆಯುವ ಫೈನಲ್​ ಪಂದ್ಯದಲ್ಲಿ 11 ಬಾರಿ ಚಾಂಪಿಯನ್ ಆಗಿರುವ​ ರಾಫೆಲ್​ ನಡಾಲ್​ರನ್ನು ಎದುರಿಸಲಿದ್ದಾರೆ.​​

For All Latest Updates

TAGGED:

ABOUT THE AUTHOR

...view details