ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಸತತ ಮೂರನೇ ಬಾರಿಗೆ ಗೆಲವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್, ಮಟಿಯೊ ಬೆರೆಟಿನಿ ವಿರುದ್ಧ 6-7 (4/7), 6-4, 6-4, 6-3 ಅಂತರದಲ್ಲಿ ಜಯ ಸಾಧಿಸಿದರು.
ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಹೊಸ ದಾಖಲೆ ಬರೆದ ನೊವಾಕ್: ಹ್ಯಾಟ್ರಿಕ್ ಸಾಧನೆ!
ಈ ಗೆಲುವಿನ ಮೂಲಕ ನೊವಾಕ್ ತಮ್ಮ 20ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಎತ್ತಿಹಿಡಿದರು. ಈ ಮೂಲಕ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ದಾಖಲೆ ಸರಿಗಟ್ಟಿದ್ದಾರೆ.
ಈ ಗೆಲುವಿನ ಮೂಲಕ ನೊವಾಕ್ ತಮ್ಮ 20ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎತ್ತಿಹಿಡಿದರು. ಈ ಮೂಲಕ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ದಾಖಲೆಯನ್ನ ಸರಿಗಟ್ಟಿದ್ದಾರೆ. ವಿಂಬಲ್ಡನ್‌ನಲ್ಲಿ ಆರು ಬಾರಿ ಚಾಂಪಿಯನ್ ಆದ ಶ್ರೇಯಸ್ಸು ಕೂಡ ಅವರದ್ದಾಗಿದೆ. ಇದು ವಿಂಬಲ್ಡನ್‌ನಲ್ಲಿ ಜೊಕೊವಿಕ್ಗೆ ಏಳನೇ ಮತ್ತು ಒಟ್ಟಾರೆ ಗ್ರ್ಯಾನ್‌ಸ್ಲಾಮ್‌ನಲ್ಲಿ 30ನೇ ಫೈನಲ್ ಪಂದ್ಯವಾಗಿತ್ತು.
ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಇಟಲಿಯ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದ, ಬೆರೆಟಿನಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು. ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿ ಭರವಸೆಯನ್ನೂ ಮೂಡಿಸಿದ್ದರು. ಆದರೆ ಮುಂದಿನ ಮೂರು ಸೆಟ್‌ಗಳಲ್ಲಿ ಜೊಕೊವಿಕ್ ಭರ್ಜರಿ ಕಮ್ಬ್ಯಾಕ್ ಮಾಡುವ ಮೂಲಕ ಬೆರೆಟಿನಿಗೆ ಶಾಕ್ ನೀಡಿದರು. ಜೊಕೊವಿಕ್ ವಿರುದ್ಧ ಬೆರೆಟಿನಿಗೆ ಇದು ಸತತ ಮೂರನೇ ಸೋಲಾಗಿದೆ.