ಕರ್ನಾಟಕ

karnataka

ETV Bharat / sports

ಯುಎಸ್​ ಓಪನ್​ನಲ್ಲಿ ನಂತರ ರ್‍ಯಾಂಕಿಂಗ್​ನಲ್ಲಿ ಭಾರಿ ಏರಿಕೆ ಕಾಣಲಿದ್ದಾರೆ ನವೋಮಿ ಒಸಾಕ - ವಿಕ್ಟೋರಿಯಾ ಅಜರೆಂಕಾ

ಭಾನುವಾರ ನವೋಮಿ ಒಸಾಕ ಬೆಲರಷಿಯನ್​ ಟೆನ್ನಿಸ್​ ಪ್ಲೇಯರ್​ ವಿಕಟೋರಿಯಾ ಅಜರೆಂಕಾ ಅವರನ್ನು ಎದುರಿಸಲಿದ್ದಾರೆ.

ನವೋಮಿ ಒಸಾಕ
ನವೋಮಿ ಒಸಾಕ

By

Published : Sep 12, 2020, 11:23 PM IST

ನ್ಯೂಯಾರ್ಕ್​: ವೆಸ್ಟರ್ನ್​ ಮತ್ತು ಸದರ್ನ್​ ಓಪನ್​ ಹಾಗೂ ಉಎಸ್​ ಓಪನ್​ನಲ್ಲಿ ಫೈನಲ್​ ಪ್ರವೇಶಿಸಿರುವ ಜಪಾನ್​ನ ನವೋಮಿ ಒಸಾಕ ಡಬ್ಲ್ಯೂಟಿಎ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಟಾಪ್​ 5ಗೆ ಎಂಟ್ರಿಕೊಟ್ಟಿದ್ದಾರೆ.

2020ರ ಆರಂಭದಲ್ಲಿ 5ನೇ ಶ್ರಾಯಾಂಕದಲ್ಲಿದ್ದ ಒಸಾಕ ನಡೆದಿದ್ದ ಆಸ್ಟ್ರೇಲಿಯಾ ಓಪನ್​ನಲ್ಲಿ ಲೀಗ್​ನಲ್ಲಿ ಲೀಗ್​ ಹಂತದಲ್ಲೇ ಸೋಲು ಕಾಣುವ ಮೂಲಕ ಟಾಪ್​ 10ರಿಂದ ಹೊರಬಿದ್ದಿದ್ದರು.

ಪ್ರಸ್ತುತ 4020 ಅಂಕಗಳೊಂದಿಗೆ 9ನೇ ಶ್ರೇಯಾಂಕದಲ್ಲಿದ್ದಾರೆ. ಭಾನುವಾರ ನಡೆಯುವ ಫೈನಲ್​ ಪಂದ್ಯದಲ್ಲಿ ಸೋತರೆ ಅವರಿಗೆ 1060 ಎಟಿಪಿ ಅಂಕದೊರೆಯಲಿದೆ. ಒಟ್ಟಾರೆ 5080 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಲಿದ್ದಾರೆ. ಒಂದು ವೇಳೆ ಫೈನಲ್ ಗೆದ್ದರೆ 1760 ಅಂಕ ಪಡೆಯಲಿದ್ದಾರೆ, ಆಗ ಒಟ್ಟಾರೆ 5780 ಅಂಕವಾಗಲಿದ್ದು 3ನೇ ಶ್ರೇಯಾಂಕ ಪಡೆಯಲಿದ್ದಾರೆ.

ಭಾನುವಾರ ನವೋಮಿ ಒಸಾಕ ಬೆಲರಷಿಯನ್​ ಟೆನ್ನಿಸ್​ ಪ್ಲೇಯರ್​ ವಿಕಟೋರಿಯಾ ಅಜರೆಂಕಾ ಅವರನ್ನು ಎದುರಿಸಲಿದ್ದಾರೆ.

ABOUT THE AUTHOR

...view details