ಕರ್ನಾಟಕ

karnataka

ETV Bharat / sports

ಫ್ರೆಂಚ್ ಓಪನ್​ ನಂತರ ಬರ್ಲಿನ್ ಓಪನ್​ನಿಂದಲೂ ಹೊರಬಂದ ನವೋಮಿ ಒಸಾಕ

ಫ್ರೆಂಚ್​ ಓಪನ್​ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದ ನಂತರ ಆಯೋಜಕರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ದಿಕ್ಕರಿಸಿದ್ದರು. ಈ ತಪ್ಪಿಗಾಗಿ ಆಯೋಜಕರು 15 ಸಾವಿರ ಯುಎಸ್​ ಡಾಲರ್​ ಮೊತ್ತದ ದಂಡವನ್ನು ವಿಧಿಸಿ ಮುಂದೆ ಇಂತಹ ತಪ್ಪುಗಳನ್ನು ಮಾಡದಿರುವಂತೆ ಎಚ್ಚರಿಸಿದ್ದರು.

By

Published : Jun 7, 2021, 8:41 PM IST

ನವೋಮಿ ಒಸಾಕ
ನವೋಮಿ ಒಸಾಕ

ಬರ್ಲಿನ್: ವಿವಾದಾತ್ಮಕವಾಗಿ ಫ್ರೆಂಚ್ ಓಪನ್​ನಿಂದ ಹೊರಬಂದಿದ್ದ ಜಪಾನ್​ ಸ್ಟಾರ್ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಮುಂಬರುವ ಬರ್ಲಿನ್ ಓಪನ್​ನಿಂದಲೂ ಹೊರಬಂದಿದ್ದಾರೆ.

ಫ್ರೆಂಚ್​ ಓಪನ್​ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದ ನಂತರ ಆಯೋಜಕರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ದಿಕ್ಕರಿಸಿದ್ದರು. ಈ ತಪ್ಪಿಗಾಗಿ ಆಯೋಜಕರು 15 ಸಾವಿರ ಯುಎಸ್​ ಡಾಲರ್​ ಮೊತ್ತದ ದಂಡವನ್ನು ವಿಧಿಸಿ ಮುಂದೆ ಇಂತಹ ತಪ್ಪುಗಳನ್ನು ಮಾಡದಿರುವಂತೆ ಎಚ್ಚರಿಸಿದ್ದರು.

ಆದರೆ, ವಿಶ್ವದ ನಂಬರ್​ 2 ಆಟಗಾರ್ತಿ ಬರ್ಲಿನ್ ಓಪನ್​ ಟೂರ್ನಿಯಿಂದಲೂ ಹಿಂದೆ ಸರಿದಿದ್ದಾರೆ. ಆಯೋಜಕರು ಈ ಸಂಗತಿಯನ್ನು ಖಾತರಿಪಡಿಸಿದ್ದಾರೆ. ಇದಲ್ಲದೇ ವಿಂಬಲ್ಡನ್​ ಓಪನ್​ನಿಂದಲೂ ಹೊರಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ

"ನಾವು ಒಸಾಕ ಅವರು ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಮಾಹಿತಿಯನ್ನು ಪಡೆದಿದ್ದೇವೆ. ಅವರು ತಮ್ಮ ಮ್ಯಾನೇಜ್​ಮೆಂಟ್​ನೊಡನೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದು ಬರ್ಲಿನ್ ಓಪನ್ ವಕ್ತಾರರೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details