ನ್ಯೂಯಾರ್ಕ್:ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಬೆಲರಷಿಯನ್ ಟೆನ್ನಿಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಮಿಂಚಿದ ಜಪಾನ್ನ ನವೋಮಿ ಒಸಾಕಾ, ಮೂರನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಯುಎಸ್ ಓಪನ್ : ಅಜರೆಂಕಾ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಒಸಾಕಾ - ಯುಎಸ್ ಓಪನ್ಗೆದ್ದ ನವೋಮಿ ಒಸಾಕ
ಬೆಲರಷಿಯನ್ ಟೆನ್ನಿಸ್ ಪ್ಲೇಯರ್ ವಿಕ್ಟೋರಿಯಾ ಅಜರೆಂಕಾರನ್ನು ಸೋಲಿಸಿದ ಜಪಾನ್ನ ನವೋಮಿ ಒಸಾಕ ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದರು.
ಯುಎಸ್ ಓಪನ್ಗೆದ್ದ ನವೋಮಿ ಒಸಾಕ
ನಾಲ್ಕನೇ ಶ್ರೇಯಾಂಕಿತ ಒಸಾಕಾ, ಆರ್ಥರ್ ಆಶೆ ಕ್ರೀಡಾಂಗಣದಲ್ಲಿ 1 ಗಂಟೆ 53 ನಿಮಿಷ ಹೋರಾಟದಲ್ಲಿ 1-6, 6-3, 6-3 ಸೆಟ್‌ಗಳಿಂದ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸಿದ್ದಾರೆ.
2018ರ ಯುಎಸ್ ಓಪನ್ ಮತ್ತು 2019ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜಯಗಳಿಸಿದ ನಂತರ 22 ವರ್ಷದ ಒಸಾಕಾಗೆ ಇದು ಮೂರನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯಾಗಿದೆ. 31 ವರ್ಷದ ಅಜರೆಂಕಾ ಕೇವಲ 26 ನಿಮಿಷಗಳಲ್ಲಿ ಮೊದಲ ಸೆಟ್ನಲ್ಲಿ ಜಯ ದಾಖಲಿಸಿದರು. ಅದರೆ ಮುಂದಿನ ಎರಡು ಸೆಟ್ಗಳಲ್ಲಿ ತಿರುಗೇಟು ನೀಡಿದ ಒಸಾಕಾ ಭರ್ಜರಿ ಜಯ ದಾಖಲಿಸಿದರು.