ಮೆಲ್ಬೋರ್ನ್:ಅಮೆರಿಕದ ಪ್ರಸಿದ್ಧ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ಗೆ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ನಲ್ಲಿ ಸೋಲಿನ ರುಚಿ ತೋರಿಸಿದ್ದ ಜಪಾನ್ನ ನವೋಮಿ ಒಸಾಕ ಇದೀಗ ಫೈನಲ್ಗೆ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಈ ಪಂದ್ಯ ನಡೆದಿತ್ತು.
2ನೇ ಶ್ರೇಯಾಂಕದ ನವೋಮಿ ಒಸಾಕ ಫೈನಲ್ ಪಂದ್ಯದಲ್ಲಿ ಅಮೆರಿಕದ ಜನ್ನಿಫರ್ ಬ್ರಾಡಿ ವಿರುದ್ಧ 6-4, 6-3 ಅಂತರದ ಗೆಲುವು ದಾಖಲು ಮಾಡಿ ಗೆಲುವಿನ ನಗೆ ಬೀರಿದ್ದಾರೆ. 39 ವರ್ಷದ ಸೆರೆನಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 6-3, 6-4 ಅಂತರದಿಂದ ಒಸಾಕ ಗೆಲುವು ದಾಖಲು ಮಾಡಿದ್ದರು.