ಕರ್ನಾಟಕ

karnataka

ETV Bharat / sports

ಫ್ರಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ ರಾಫೆಲ್​ ನಡಾಲ್​, ಹಾಲೆಪ್​ - Wimbledon champion Simona Halep

20 ನೇ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್​ನ ನಡಾಲ್​ ತಮ್ಮ ದೇಶದವರೇ ಆದ ಪಬ್ಲೊ ಕರೆನೊ ಬುಸ್ಟಾ ಅವರನ್ನು 6-1,6-2,6-4 ರ ನೇರ ಸೆಟ್​ಗಳ ಅಂತರದಲ್ಲಿ ಮಣಿಸುವ ಮೂಲಕ 16ರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.

ಆಸ್ಟ್ರೇಲಿಯಾ ಓಪನ್​ 2020
ರಾಫೆಲ್​ ನಡಾಲ್​

By

Published : Jan 25, 2020, 4:21 PM IST

ಮೆಲ್ಬೋರ್ನ್​: ವಿಶ್ವದ ನಂಬರ್​ ಒನ್​ ಆಟಗಾರ ರಾಫೆಲ್​ ನಡಾಲ್ ಆಸ್ಟ್ರೆಲಿಯ ಓಪನ್​ನಲ್ಲಿ ತಮ್ಮದೇ ದೇಶದ ಆಟಗಾರನನ್ನು ಮಣಿಸಿ 4ನೇ ಸುತ್ತು ಪ್ರವೇಶಿಸಿದ್ದಾರೆ.

20 ನೇ ಗ್ರ್ಯಾಂಡ್​ಸ್ಲಾಮ್​ ಮೇಲೆ ಕಣ್ಣಿಟ್ಟಿರುವ ಸ್ಪೇನ್​ನ ನಡಾಲ್​ ತಮ್ಮ ದೇಶದವರೇ ಆದ ಪಬ್ಲೊ ಕರೆನೊ ಬುಸ್ಟಾ ಅವರನ್ನು 6-1,6-2,6-4 ರ ನೇರ ಸೆಟ್​ಗಳ ಅಂತರದಲ್ಲಿ ಮಣಿಸುವ ಮೂಲಕ 16ರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.

ಒಂದು ಗಂಟೆ 38 ನಿಮಿಷ ನಡೆದ ಕಾದಾಟದಲ್ಲಿ ಮೊದಲೆರಡು ಸೆಟ್​ಗಳಲ್ಲಿ ಸುಲಭ ಜಯ ಸಾಧಿಸಿದ ನಡಾಲ್​ ಮೂರನೇ ಸೆಟ್​ನಲ್ಲಿ ಕೊಂಚ ಪ್ರತಿರೋಧ ಎದುರಾದರೂ 6-4ರಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ನಿಸ್ಸಂದೇಹವಾಗಿ ಇದು ನನಗೆ ಅತ್ಯುತ್ತಮ ಪಂದ್ಯವಾಗಿದೆ. ನಾಲ್ಕನೇ ಸುತ್ತು ಪ್ರವೇಶಿಸಿರುವುದಕ್ಕೆ ಖುಷಿಯಾಗಿದೆ. ಈ ದಿನ ಆರಂಭದಲ್ಲೇ ಅತ್ಯುತ್ತಮ ಸರ್ವ್​ ಹಾಗೂ ಉತ್ತಮ ಫೋರ್‌ಹ್ಯಾಂಡ್‌ ಶಾಟ್​ಗಳನ್ನು ಪ್ರಯೋಗಿಸಿದ್ದು ನನಗೆ ಅನುಕೂಲವಾಯಿತು ಎಂದು ನಡಾಲ್​ ಹೇಳಿದರು.

ಈ ಜಯದ ಮೂಲಕ ನಡಾಲ್, ಬುಸ್ಟಾ ವಿರುದ್ಧದ ಜಯದ ಅಂತರವನ್ನು 5-0ಗೆ ಹೆಚ್ಚಿಸಿಕೊಂಡರು. ಅಲ್ಲದೇ ಸ್ಪೇನ್‌ನ ಆಟಗಾರರ ವಿರುದ್ಧ ಅವರು ಸತತ 18ನೆ ಜಯ ಸಾಧಿಸಿದರು.

33 ವರ್ಷದ ನಡಾಲ್ ಟೆನ್ನಿಸ್​ ಜಗತ್ತಿನಲ್ಲಿ 1000 ಪಂದ್ಯದ ಗೆಲುವಿನ ದಾಖಲೆ ಬರೆಯಲು ಇನ್ನು ಕೇವಲ 16 ಗೆಲುವುಗಳ ಅಗತ್ಯವಿದೆ. ಇಷ್ಟು ಪಂದ್ಯಗಳನ್ನು ಗೆದ್ದರೆ ನಡಾಲ್​ ಓಪನ್​ ಕಾಲಘಟ್ಟದಲ್ಲಿ ಈ ಸಾಧನೆ ಮಾಡಿದ ಮೊದಲ ಟನ್ನಿಸ್​ ಆಟಗಾರ ಎನಿಸಿಕೊಳ್ಳಲಿದ್ದಾರೆ. ​

ಹಾಲೆಪ್​ಗೆ ಜಯ:

ಹಾಲಿ ಮಹಿಳೆಯರ ವಿಂಬಲ್ಡನ್​ ಚಾಂಪಿಯನ್​ ಸಿಮೊನಾ ಹಾಲೆಪ್​ ಕಜಕಿಸ್ತಾನದ ಯುಲಿಯಾ ಪುಟಿನ್​ತ್ಸೆವಾ ವಿರುದ್ಧ 6-1, 6-4 ರ ಹಂತರದಲ್ಲಿ ಗೆಲುವು ಸಾಧಿಸಿ 16 ಹಂತಕ್ಕೆ ಕಾಲಿಟ್ಟರು. ಹಾಲೆಪ್​ ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಎಲಿಸೆ ಮೆರಟೆನ್ಸ್​ ವಿರುದ್ಧ ಕಾದಾಡಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ 18 ನೇ ಶ್ರೇಯಾಂಕದ ಜರ್ಮನ್​ನ ಆ್ಯಂಜೆಲಿಕ್​ ಕೆರ್ಬರ್​ 6-2, 6-7(4), 6-3 ರಲ್ಲಿ ರಷ್ಯಾದ ಅನಾಸ್ತೇಸಿಯಾ ಪಾವ್ಲಿಯುಚೆಂಕೋವಾ ವಿರುದ್ಧ ಗೆದ್ದರು. ಅನಾಸ್ತೇಸಿಯಾ ಅವರು ವಿಶ್ವದ 2ನೇ ಶ್ರೇಯಾಂಕದ ಕರೋಲಿನಾ ಪಿಸ್ಕೋವಾ ವಿರುದ್ಧ ಗೆಲುವಿನ ನಗೆ ಬೀರಿದ್ದರು.

ABOUT THE AUTHOR

...view details