ಲಾಸ್ ಏಂಜಲೀಸ್: ವಿಶ್ವದ 2ನೇ ಶ್ರೇಯಾಂಕದ ಟೆನ್ನಿಸ್ ಪ್ಲೇಯರ್ ಸ್ಪೇನ್ನ ರಾಫೆಲ್ ನಡಾಲ್ ಮೆಕ್ಸಿಕೋ ಓಪನ್ ಗೆಲ್ಲುವ ಮೂಲಕ 2020ರ ಮೊದಲ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.
ಆಸ್ಟ್ರೇಲಿಯಾ ಓಪನ್ನ ಕ್ವಾರ್ಟ್ರ್ ಫೈನಲ್ನಲ್ಲಿ ಸೋಲನುಭವಿಸಿದ್ದ 19 ಗ್ರ್ಯಾಂಡ್ಸ್ಸ್ಲಾಮ್ ಒಡೆಯ ರಾಫೆಲ್ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಕಳೆದುಕೊಂಡಿದ್ದರು. ಆದರೆ ಮೆಕ್ಸಿಕೋ ಓಪನ್ನಲ್ಲಿ ಗೆಲುವಿನ ಹಳಿಗೆ ಮರಳಿರುವ 33 ವರ್ಷದ ನಡಾಲ್ ಅಮೆರಿಕದ ಹ್ಯಾರಿ ಫ್ರಿಟ್ಜ್ ಅವರನ್ನು 6-3, 6-2 ರ ನೇರ ಸೆಟ್ಗಳಲ್ಲಿ ಮಣಿಸುವ ಮೂಲಕ ಎಟಿಪಿ ಮೆಕ್ಸಿಕೋ ಟ್ರೋಫಿಗೆ ಮುತ್ತಿಕ್ಕಿದ್ದಾರೆ.