ರೋಮ್:ವಿಶ್ವದ 3 ನೇ ಶ್ರೇಯಾಂಕದ ಸ್ಪೇನ್‌ನ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ಭಾನುವಾರ 10 ನೇ ಇಟಾಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಗೆಲುವು ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಇಟಾಲಿಯನ್ ಓಪನ್ ಫೈನಲ್: ಜೊಕೊವಿಕ್ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ನಡಾಲ್ - ನೊವಾಕ್ ಜೊಕೊವಿಕ್
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಡಾಲ್ 7-5, 1-6, 6-3 ಸೆಟ್‌ಗಳಿಂದ ಜೋಕೊವಿಕ್ ಅವರನ್ನು ಮಣಿಸಿದರು. ಈ ಜಯದೊಡನೆ ನಡಾಲ್ ಎರಡು ವಾರಗಳಲ್ಲಿ ಪ್ರಾರಂಭವಾಗುವ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ತಮ್ಮ 14 ನೇ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ರಾಫೆಲ್ ನಡಾಲ್
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಡಾಲ್ 7-5, 1-6, 6-3 ಸೆಟ್‌ಗಳಿಂದ ಜೋಕೊವಿಕ್ ಅವರನ್ನು ಸೋಲಿಸಿದರು. ಈ ಜಯದೊಡನೆ ನಡಾಲ್ ಎರಡು ವಾರಗಳಲ್ಲಿ ಪ್ರಾರಂಭವಾಗುವ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ತಮ್ಮ 14 ನೇ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ಕಳೆದ ವರ್ಷದ ರೋಲ್ಯಾಂಡ್ ಗ್ಯಾರೊಸ್(ಫ್ರೆಂಟ್ ಓಪನ್) ಫೈನಲ್‌ನಲ್ಲಿ ನಡಾಲ್ ಜೋಕೊವಿಕ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.