ಜೂರಿಚ್: ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ಗೆ ಅವರ ಪೋಷಕರು ಸಾಕಷ್ಟು ಹಣಕಾಸು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಆದರೆ ಕ್ರೀಡೆಯಲ್ಲಿ ಯಶಸ್ಸು ಅವರು ನೀಡಿದ್ದು ಕೇವಲ 2 ವರ್ಷ ಕಾಲಾವಕಾಶ. ಈ ಅಲ್ಪ ಕಾಲಾವಧಿಯಲ್ಲೇನಾದ್ರೂ ವಿಫಲರಾದರೆ ಮತ್ತೆ ಶಾಲೆಗೆ ಹೋಗಬೇಕೆಂದು ಹೇಳಿದ್ದರು ಎಂಬ ವಿಚಾರವನ್ನು ವಿಶ್ವದ ಶ್ರೀಮಂತ ಕ್ರೀಡಾಪಟು ರೋಜರ್ ಪೆಡರರ್ ಹೇಳಿದ್ದಾರೆ.
'ನನಗೆ ಕ್ರೀಡೆಯಲ್ಲಿ ಯಶಸ್ವಿಯಾಗಲು ಪೋಷಕರು ನೀಡಿದ್ದು ಕೇವಲ 2 ವರ್ಷ ಅವಕಾಶ' - Roger Federe greatest male tennis players of all time
ಪೋಷಕರು ನನ್ನ ಟೆನ್ನಿಸ್ ತರಬೇತಿಗೆ ಒಂದು ವರ್ಷಕ್ಕೆ 30,000 ಸ್ವಿಸ್ ಹಣ ನೀಡುತ್ತಿದ್ದರು. ಇಷ್ಟು ಹಣ ವ್ಯಯಿಸಿ ತರಭೇತಿ ಪಡೆಯುತ್ತಿದ್ದರೂ ನಾನೊಬ್ಬ ವೃತ್ತಿಪರ ಟೆನ್ನಿಸ್ ಆಟಗಾರನಾಗುತ್ತೇನೆ ಎಂಬುವುದರಲ್ಲಿ ಅವರಿಗೆ ಸಂಶಯವಿತ್ತು ಎಂದು 38 ವರ್ಷದ ವಿಶ್ವ ಚಾಂಪಿಯನ್ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಹೇಳಿಕೊಂಡಿದ್ದಾರೆ.
!['ನನಗೆ ಕ್ರೀಡೆಯಲ್ಲಿ ಯಶಸ್ವಿಯಾಗಲು ಪೋಷಕರು ನೀಡಿದ್ದು ಕೇವಲ 2 ವರ್ಷ ಅವಕಾಶ' Roger Federer](https://etvbharatimages.akamaized.net/etvbharat/prod-images/768-512-7995066-670-7995066-1594541465159.jpg)
"ನಾನು 16 ವರ್ಷದವನಾಗಿದ್ದಾಗ ಶಾಲೆ ತ್ಯಜಿಸಿ ಟೆನ್ನಿಸ್ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಪೋಷಕರಿಗೆ ತಿಳಿಸಿದ್ದೆ. ಅದಕ್ಕೆ ನನ್ನ ತಂದೆ ನನಗೆ 2 ವರ್ಷ ಕಾಲಾವಕಾಶ ನೀಡಿದ್ದರು. ಆ ಸಮಯದಲ್ಲಿ ನಾನು ವೃತ್ತಿಪರ ಟೆನ್ನಿಸಿಗನಾಗಲು ವಿಫಲನಾದರೆ, ಮತ್ತೆ ಶಾಲೆಗೆ ಹೋಗಬೇಕು ಎಂದು ಎಚ್ಚರಿಸಿದ್ದರು. ಅದಕ್ಕೆ ನಾನು ನನ್ನನ್ನು ನಂಬಿ ಎಂದು ಹೇಳಿದ್ದೆ. ಅದೃಷ್ಟವಶಾತ್ ನಾನು ಆ ವೇಳೆ ಜೂನಿಯರ್ ವಿಶ್ವಚಾಂಪಿಯನ್ ಆದೆ " ಎಂದು ಅವರು ತಿಳಿಸಿದ್ದಾರೆ.
ವಿಶ್ವದಲ್ಲೇ ಅತ್ಯುತ್ತಮ ಪುರುಷ ಟೆನ್ನಿಸ್ ಆಟಗಾರನಾಗಿರುವ ರೋಜರ್ 20 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಟೆನ್ನಿಸ್ ಶ್ರೇಯಾಂಕದಲ್ಲಿ ರೋಜರ್ ಸತತ 237 ವಾರ ಸೇರಿದಂತೆ 310 ವಾರಗಳ ಕಾಲ ಮೊದಲ ಶ್ರೇಯಾಂಕದಲ್ಲಿದ್ದ ದಾಖಲೆ ಇದೆ. ಈ ಮೂಲಕ ಅತಿಹೆಚ್ಚು ವಾರಗಳ ಕಾಲ ಅಗ್ರ ಸ್ಥಾನದಲ್ಲಿದ್ದ ಆಟಗಾರ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ.