ಕರ್ನಾಟಕ

karnataka

ETV Bharat / sports

ಮಿಯಾಮಿ ಓಪನ್​: ಒಸಾಕರ ಜೈತ್ರಯಾತ್ರೆಗೆ ಬ್ರೇಕ್ ಹಾಕಿ ನಾಕೌಟ್​ ಪ್ರವೇಶಿಸಿದ ಸಕ್ಕರಿ - ಮಿಯಾಮಿ ಓಪನ್ ಕ್ವಾರ್ಟರ್ ಫೈನಲ್

ಒಂದು ವರ್ಷದಿಂದ ಸೋಲೇ ಕಾಣದೆ ಸತತ 23 ಪಂದ್ಯಗಳಿಂದಲೂ ಅಜೇಯರಾಗುಳಿದಿದ್ದ ಜಪಾನ್‌ನ ಸ್ಟಾರ್​ ಆಟಗಾರ್ತಿಯನ್ನು ಮರಿಯಾ ಸಕ್ಕರಿ 6-0,6-4ರ ನೇರ ಸೆಟ್​ಗಳಲ್ಲಿ ಮಣಿಸುವ ಮೂಲಕ ಶಾಕ್ ನೀಡಿದ್ದಾರೆ.

ಮಿಯಾಮಿ ಓಪನ್ 2021
ಮರಿಯಾ ಸಕ್ಕರಿ

By

Published : Apr 1, 2021, 9:12 PM IST

ಮಿಯಾಮಿ(ಯುಎಸ್​ಎ): ವಿಶ್ವದ 2ನೇ ಶ್ರೇಯಾಂಕಿತ ಆಟಗಾರ್ತಿಯಾದ ಜಪಾನ್​ನ ನವೋಮಿ ಒಸಾಕರನ್ನು ಮಣಿಸುವ ಮೂಲಕ ಗ್ರೀಸ್​ನ ಮರಿಯಾ ಸಕ್ಕರಿ ಸೆಮಿಫೈನಲ್​ ಪ್ರವೇಶಿಸಿದರು.

ಒಂದು ವರ್ಷದಿಂದ ಸೋಲೇ ಕಾಣದೆ ಸತತ 23 ಪಂದ್ಯಗಳಿಂದಲೂ ಅಜೇಯರಾಗುಳಿದಿದ್ದ ಜಪಾನ್‌ನ ಸ್ಟಾರ್​ ಆಟಗಾರ್ತಿಯನ್ನು ಮರಿಯಾ ಸಕ್ಕರಿ 6-0,6-4ರ ನೇರ ಸೆಟ್​ಗಳಲ್ಲಿ ಮಣಿಸಿದ್ದಾರೆ. ಯುಎಸ್​ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಒಸಾಕ ಎರಡೂ ಸೆಟ್​ಗಳಲ್ಲೂ 23ನೇ ಶ್ರೇಯಾಂಕದ ಆಟಗಾರ್ತಿಯ ವಿರುದ್ಧ ಹೀನಾಯವಾಗಿ ಸೋಲುಂಡರು.

ಎರಡನೇ ಸೆಟ್​ನಲ್ಲಿ 0-3ರ ಹಿನ್ನಡೆಯಲ್ಲಿದ್ದ ಸಕ್ಕರಿ 22 ವಿನ್ನರ್ಸ್​ಗಳೊಂದಿಗೆ ತಿರುಗಿಬಿದ್ದು, 6-4ರಲ್ಲಿ ಸೆಟ್​ ಗೆದ್ದರು. ಒಸಾಕ 23 ತಪ್ಪುಗಳನ್ನೆಸಗಿದರೆ, ಕೇವಲ 5 ವಿನ್ನರ್ಸ್​ಗಳನ್ನು ಮಾತ್ರ ಪಡೆದರು.

ಸಕ್ಕರಿ ಸೆಮಿಫೈನಲ್​ ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಕೆನಡಾದ ಬಿಯಾಂಕ ಆ್ಯಂಡ್ರಿಸ್ಕು ಅವರ ಸವಾಲನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ: ಮಿಯಾಮಿ ಓಪನ್.. ಸೆಮಿಫೈನಲ್​ಗೆ ಲಗ್ಗೆಯಿಟ್ಟ ನಂಬರ್ 1 ಆಶ್ಲೆ ಬಾರ್ಟಿ

ABOUT THE AUTHOR

...view details