ಮೆಲ್ಬೋರ್ನ್:ಆಸ್ಟ್ರೇಲಿಯನ್ ಓಪನ್ನಲ್ಲಿನಾಲ್ಕನೇ ಶ್ರೇಯಾಂಕಿತ ಡೇನಿಯಲ್ ಮೆಡ್ವೆಡೆವ್ ಅವರು ತಮ್ಮ ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ ನಾಲ್ಕನೇ ಸುತ್ತಿನಲ್ಲಿ ಗೆಲುವು ಸಾಧಿಸಿ ಐದನೇ ಸುತ್ತಿಗೆ ಲಗ್ಗೆಯಿಟ್ಟರು.
ಪ್ರಬಲ ಹೋರಾಟದಲ್ಲಿ ಗೆದ್ದು ಐದನೇ ಸುತ್ತಿಗೆ ಪ್ರವೇಶಿಸಿದ ಡೇನಿಯಲ್ ಮೆಡ್ವೆಡೆವ್ - ಆಸ್ಟ್ರೇಲಿಯನ್ ಓಪನ್
ನಾಲ್ಕನೇ ಶ್ರೇಯಾಂಕಿತ ಡೇನಿಯಲ್ ಮೆಡ್ವೆಡೆವ್ ಅವರು ಎದುರಾಳಿ 28ನೇ ಶ್ರೇಯಾಂಕಿತ ಫಿಲಿಪ್ ಕ್ರಜಿನೋವಿಕ್ ವಿರುದ್ಧ 6-3, 6-3, 4-6, 3-6, 6-0 ಸೆಟ್‌ಗಳಿಂದ ಜಯಗಳಿಸಿದರು.
ಎದುರಾಳಿ 28ನೇ ಶ್ರೇಯಾಂಕಿತ ಫಿಲಿಪ್ ಕ್ರಜಿನೋವಿಕ್ ವಿರುದ್ಧ 6-3, 6-3, 4-6, 3-6, 6-0 ಸೆಟ್‌ಗಳಿಂದ ಜಯಗಳಿಸಿದರು. ಮೊದಲೆರಡು ಸೆಟ್ನಲ್ಲಿ ಗೆದ್ದು ಮುನ್ನಡೆ ಸಾಧಿಸಿದ್ದ ಮೆಡ್ವೆಡೆವ್, ಮೂರನೇ ಸುತ್ತಿನ ಹಣಾಹಣಿಯಲ್ಲಿ ಕ್ರಜಿನೋವಿಕ್ ಎರಡು ಸೆಟ್‌ಗಳಲ್ಲಿ ಹಿಂದಿಕ್ಕಿದರು. ರೋಚಕ ಐದನೇ ಸೆಟ್ನಲ್ಲಿ ಪುನರಾಗಮನ ಮಾಡಿ ಐದನೇ ಸುತ್ತಿಗೆ ಪ್ರವೇಶಿಸಿದರು.
ನಾಲ್ಕನೇ ಸೆಟ್ನಲ್ಲಿ ಮೆಡ್ವೆಡೆವ್ ಹೆಣಗಾಡುತ್ತಿದ್ದ ಸಂದರ್ಭದಲ್ಲಿ ಅವರ ಕೋಚ್ ಗಿಲ್ಲೆಸ್ ಸೆರ್ವಾರಾ ರಾಡ್ ಲಾವರ್ ಅಲ್ಲಿಂದ ಹೊರ ನಡೆದರು. ಈ ಪಂದ್ಯ ಗೆಲುವು ಸಾಧಿಸುವ ಮೂಲಕ ಸತತ 17 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಅದರಲ್ಲಿ 2020ರ ಋತುವಿನ ಅಂತ್ಯದ ಎಟಿಪಿ ಫೈನಲ್ ಗೆದ್ದ ಪಂದ್ಯವೂ ಸೇರಿದೆ.