ಕರ್ನಾಟಕ

karnataka

ETV Bharat / sports

ಮೆಡ್ವೆಡೆವ್​ಗೆ ಕೊರೊನಾ: ಮಾಂಟೆ ಕಾರ್ಲೊ ಟೂರ್ನಿಯಿಂದ ಹೊರಬಂದ ರಷ್ಯನ್ ಸ್ಟಾರ್​ - Australian tour

ಆಸ್ಟ್ರೇಲಿಯನ್ ಓಪನ್​ ರನ್ನರ್ ಅಪ್​ ಮೆಡ್ವೆಡೆವ್​ ಪ್ರಸ್ತುತ ಐಸೊಲೇಷನ್​ನಲ್ಲಿದ್ದಾರೆ. ಎಟಿ ವೈದ್ಯಕೀಯ ತಂಡ ಅವರ ಮೇಲೆ ನಿಗಾ ವಹಿಸಿದ್ದಾರೆ ಎಂದು ಎಟಿಪಿ ಹೇಳಿಕೆ ಬಿಡುಗಡೆ ಮಾಡಿದೆ.

ಮಾಂಟೆ ಕಾರ್ಲೊ ಟೂರ್ನಿಯಿಂದ ಹೊರಬಂದ ರಷ್ಯನ್ ಸ್ಟಾರ್​
ಮೆಡ್ವೆಡೆವ್​ಗೆ ಕೊರೊನಾ

By

Published : Apr 13, 2021, 8:21 PM IST

ಮೊನಾಕೊ: ವಿಶ್ವ ಟೆನ್ನಿಸ್​ನ 2ನೇ ಶ್ರೇಯಾಂಕಿತ ರಷ್ಯಾದ ಡೇನಿಲ್ ಮೆಡ್ವೆಡೆವ್​ಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದ್ದು, ಮುಂಬರುವ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಆಸ್ಟ್ರೇಲಿಯನ್ ಓಪನ್​ ರನ್ನರ್ ಅಪ್​ ಮೆಡ್ವೆಡೆವ್​ ಪ್ರಸ್ತುತ ಐಸೊಲೇಷನ್​ನಲ್ಲಿದ್ದಾರೆ. ಎಟಿಪಿ ವೈದ್ಯಕೀಯ ತಂಡ ಅವರ ಮೇಲೆ ನಿಗಾ ವಹಿಸಿದ್ದಾರೆ ಎಂದು ಎಟಿಪಿ ಹೇಳಿಕೆ ಬಿಡುಗಡೆ ಮಾಡಿದೆ.

ಎಟಿಪಿ ಹೇಳಿಕೆ

ಮಾಂಟೆ-ಕಾರ್ಲೊ ಟೂರ್ನಿಯಲ್ಲಿ ಆಡದಿರುವುದಕ್ಕೆ ನನಗೆ ದೊಡ್ಡ ನಿರಾಶೆಯಾಗಿದೆ ಎಂದು 25 ವರ್ಷದ ಮೆಡ್ವೆಡೆವ್ ಹೇಳಿದ್ದು, ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳುವುದಕ್ಕೆ ನನ್ನ ಗಮನವಿರುತ್ತದೆ. ಆದಷ್ಟು ಬೇಗ ಟೂರ್​ಗೆ ಸುರಕ್ಷಿತವಾಗಿ ಮರಳಲು ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುತ್ತಿಗೆ ಮೆಡ್ವೆಡೆವ್​ ಬದಲು ಸಿಂಗಲ್ಸ್​ನಲ್ಲಿ ಬೇರೆ ಆಟಗಾರನನ್ನು ಬದಲಾಯಿಸಲಾಗಿದೆ. ಡಬಲ್ಸ್​ನಿಂದೆ ಹಿಂದೆ ಸರಿಯಲಾಗಿದೆ ಎಂದು ಎಟಿಪಿ ತಿಳಿಸಿದೆ.

ಇದನ್ನು ಓದಿ:4 ವರ್ಷಗಳ ಬಳಿಕ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್​ಗೆ ಸೇರಿದ ಸಾನಿಯಾ ಮಿರ್ಜಾ

ABOUT THE AUTHOR

...view details