ಕರ್ನಾಟಕ

karnataka

ETV Bharat / sports

ಪ್ಯಾರಿಸ್ ಮಾಸ್ಟರ್ಸ್: ರಾವೊನಿಕ್​ಗೆ ಸೋಲುಣಿಸಿ ಫೈನಲ್ ಪ್ರವೇಶಿಸಿದ ಮೆಡ್ವೆಡೆವ್ - ಡೆನಿಯಲ್ ಮೆಡ್ವೆಡೆವ್​ಗೆ ಗೆಲುವು

ಶನಿವಾರ ನಡೆದ ಪ್ಯಾರಿಸ್ ಮಾಸ್ಟರ್ಸ್ ಸೆಮಿ ಫೈನಲ್ ಪಂದ್ಯದಲ್ಲಿ ರಾವೊನಿಕ್​ ವಿರುದ್ಧ ಗೆಲುವು ಸಾಧಿಸಿದ ಮೆಡ್ವೆಡೆವ್ ಫೈನಲ್ ಪ್ರವೇಶಿಸಿದ್ದಾರೆ.

Medvedev beats Raonic to reach first Paris Masters final
ಡೆನಿಯಲ್ ಮೆಡ್ವೆಡೆವ್

By

Published : Nov 8, 2020, 8:04 AM IST

ಪ್ಯಾರಿಸ್: ಕೆನಡಾದ ಮಿಲೋಸ್ ರಾವೊನಿಕ್​ ಅವರನ್ನು 6-4, 7-6 (4) ಸೆಟ್‌ಗಳಿಂದ ಸೋಲಿಸಿ ಡೆನಿಯಲ್ ಮೆಡ್ವೆಡೆವ್ ಮೊದಲ ಬಾರಿಗೆ ಪ್ಯಾರಿಸ್ ಮಾಸ್ಟರ್ಸ್ ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಮೂರನೇ ಶ್ರೇಯಾಂಕಿತ ರಷ್ಯನ್ ಆಟಗಾರ ಮೆಡ್ವೆಡೆವ್ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಮೂರನೇ ಮಾಸ್ಟರ್ಸ್ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ರಾವೊನಿಕ್​ಗೆ ಸೋಲುಣಿಸಿ ಫೈನಲ್ ಪ್ರವೇಶಿಸಿದ ಮೆಡ್ವೆಡೆವ್

10ನೇ ಶ್ರೇಯಾಂಕಿತ ರಾವೊನಿಕ್ ಇಲ್ಲಿಯವರೆಗೆ ಮಾಸ್ಟರ್ಸ್ ಪಂದ್ಯಾವಳಿಯನ್ನು ಗೆದ್ದಿಲ್ಲ. ನಿನ್ನೆ ನಡೆದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಎರಡನೇ ಬಾರಿ ಸೆಮಿಫೈನಲ್​ ಪಂದ್ಯದಲ್ಲಿ ಪರಾಭವಗೊಂಡಿದ್ದಾರೆ. ಈ ಹಿಂದೆ 2014 ರಲ್ಲಿ ಜೊಕೊವಿಕ್ ವಿರುದ್ಧ ಸೋತಿದ್ದರು.

2019 ರ ಯು.ಎಸ್. ಓಪನ್ ರನ್ನರ್ ಅಪ್ ಮೆಡ್ವೆಡೆವ್ ತನ್ನ ವೃತ್ತಿಜೀವನದ ಎಂಟನೇ ಮತ್ತು ಈ ವರ್ಷದ ಮೊದಲನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ.

ABOUT THE AUTHOR

...view details