ದೋಹಾ: ದೋಹಾದಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್ ಸಿರೀಸ್ ಟೇಬಲ್ ಟೆನಿಸ್ ಪಂದ್ಯಾವಳಿಯ ಎರಡನೇ ಸುತ್ತಿಗೆ ಭಾರತದ ಮಾನಿಕಾ ಬಾತ್ರಾ ಮತ್ತು ಸತ್ಯನ್ ಜ್ಞಾನಶೇಖರನ್ ಲಗ್ಗೆ ಇಟ್ಟಿದ್ದಾರೆ.
ಮಹಿಳಾ ಸಿಂಗಲ್ಸ್‌ನಲ್ಲಿ 63 ನೇ ರ‍್ಯಾಂಕಿಂಗ್ ಹೊಂದಿರುವ ಮಾನಿಕಾ 3-0 ಸೆಟ್ಗಳಿಂದ ಚೀನಾದ ತೈಪೆಯ ಹ್ಸೀನ್-ಟಿಜಿ ಚೆಂಗ್ ಅವರನ್ನು ಮಣಿಸಿದರು. 11-5, 11-9, 11-9 ರಿಂದ ನೇರ ಸೆಟ್‌ಗಳಲ್ಲಿ ಎದುರಾಳಿಯನ್ನ ಸುಲಭವಾಗಿ ಮಣಿಸಿದರು. 2018 ರ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಜಪಾನಿನ ವಿಶ್ವದ 3 ನೇ ಶ್ರೇಯಾಂಕದ ಮಿಮಾ ಇಟೊ ಅವರನ್ನ ಮುಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.