ವಾಷಿಂಗ್ಟನ್: ಜಪಾನಿನ ಟೆನಿಸ್ ಆಟಗಾರ ಕೀ ನಿಶಿಕೋರಿ ಕೋವಿಡ್ 19 ಪಾಸಿಟಿವ್ ದೃಡಪಟ್ಟಿರುವುದರಿಂದ ಮುಂದಿನ ವಾರದಿಂದ ಪ್ರಾರಂಭವಾಗುವ ವೆಸ್ಟರ್ನ್ ಮತ್ತು ಸದರ್ನ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ.
" ಈ ದಿನ ಬೆಳಿಗ್ಗೆ ಫ್ಲೋರಿಡಾದಲ್ಲಿ COVID-19 ಪರೀಕ್ಷೆಗೆ ಒಳಪಟ್ಟಿದ್ದು, ನನಗೆ ಪಾಸಿಟಿವ್ ವರದಿ ಬಂದಿದೆ" ಎಂದು ನಿಶಿಕೋರಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾಸಿಟಿವ್ ವರದಿ ಬಂದಿರುವುದರಿಂದ ಕ್ವಾರಂಟೈನ್ನಲ್ಲಿರಬೇಕಾಗಿದೆ. ಹಾಗಾಗು ಸಿನ್ಸಿನ್ನಾಟಿ ಟೂರ್ನಮೆಂಟ್ನಿಂದ ಹೊರಬರಬೇಕಿದೆ. ನಾನು ಮತ್ತು ನನ್ನ ತಂಡ ಶುಕ್ರವಾರ ಮತ್ತೊಇಂದು ಸುತ್ತಿನ ಕೋವಿಡ್ 19 ಪರೀಕ್ಷೆಗ ಒಳಗಾಗಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ನನ್ನ ಅರೋಗ್ಯದಿಂದಿದ್ದೇನೆ ಮತ್ತು ಐಸೊಲೇಟ್ ಆಗಿದ್ದೇನೆ, ಆದರೆ ಶುಕ್ರವಾರ ಮತ್ತೆ ಪರೀಕ್ಷೆ ತೆಗೆದುಕೊಳ್ಳಲಿದ್ದೇನೆ ಎಂದು 30 ವರ್ಷದ ನಿಶಿಕೋರಿ ಹೇಳಿದ್ದಾರೆ.
ಅಮೆರಿಕಾ ಸಾರ್ವಜನಿಕ ಆರೋಗ್ಯ ಇಲಾಖೆಯ ಹೇಳಿಕೆ ಪ್ರಕಾರ, ಯಾರಿಗೆ ಕೋವಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಬರುತ್ತದೆಯೋ ಅವರು 10 ದಿನಗಳ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ. ಇದೀಗ ನಿಶಿಕೋರಿ ಆಗಸ್ಟ್ 26ರ ತನಕ ಅಂದರೆ, ಅಮೆರಿಕಾ ಓಪನ್ ಆರಂಭಕ್ಕೆ ಇನ್ನು 5 ದಿನಗಳಿರುವಾಗ ಅವರ ಕ್ವಾರಂಟೈನ್ ಅವದಿ ಮುಗಿಯಲಿದೆ.
ಹಾಲಿ ಚಾಂಪಿಯನ್‌ಗಳಾದ ರಾಫೆಲ್ ನಡಾಲ್ ಮತ್ತು ಬಿಯಾಂಕಾ ಆಂಡ್ರೀಸ್ಕು ಆಗಸ್ಟ್ 31 ರಿಂದ ಪ್ರಾರಂಭವಾಗಲಿರುವ ಯುಎಸ್ ಓಪನ್‌ನಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ವಿಶ್ವದ ನಂಬರ್ ಒನ್ ನೊವಾಕ್ ಜೊಕೊವಿಕ್ ಮಾತ್ರ ಟೂರ್ನಿಯಲ್ಲಿ ಆಡಲಿದ್ದೇನೆ ಎಂದು ಖಚಿತಪಡಿಸಿದ್ದಾರೆ.