ಕರ್ನಾಟಕ

karnataka

ETV Bharat / sports

ಇಟಾಲಿಯನ್ ಓಪನ್.. ಕ್ಯಾಸ್ಪರ್ ರೂಡ್ ಮಣಿಸಿ ಫೈನಲ್ ಪ್ರವೇಶಿಸಿದ ಜೊಕೊವಿಕ್ - ನೊವಾಕ್ ಜೊಕೊವಿಕ್

ಇಟಾಲಿಯನ್ ಓಪನ್‌ ಸೆಮಿಫೈನಲ್ ಪಂದ್ಯದಲ್ಲಿ ಕ್ಯಾಸ್ಪರ್ ರೂಡ್ ವಿರುದ್ಧ ಜಯ ಗಳಿಸಿದ ಜೊಕೊವಿಕ್ ಫೈನಲ್ ಪ್ರವೇಶಿಸಿದ್ದಾರೆ.

Djokovic beats Rudd 7-5,6-3 to reach final
ಫೈನಲ್ ಪ್ರವೇಶಿಸಿದ ಜೊಕೊವಿಕ್

By

Published : Sep 21, 2020, 10:25 AM IST

ರೋಮ್: ಭಾನುವಾರ ನಡೆದ ಇಟಾಲಿಯನ್ ಓಪನ್‌ ಸೆಮಿಫೈನಲ್ ಪಂದ್ಯದಲ್ಲಿ ಕ್ಯಾಸ್ಪರ್ ರೂಡ್ ವಿರುದ್ಧ ಜಯ ಗಳಿಸಿದ ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಕ್ ಫೈನಲ್ ಪ್ರವೇಶಿಸಿದ್ದಾರೆ.

ಮೊದಲ ಬಾರಿಗೆ ಮೈದಾನಕ್ಕೆ ಪ್ರವೇಶಿಸಿಸಲು ಸಾವಿರ ಜನಕ್ಕೆ ಅವಕಾಶ ನಿಡಲಾಗಿತ್ತು. ಪ್ರೇಕ್ಷಕರ ಬೆಂಬಲದೊಂದಿಗೆ ರೂಡ್ ವಿರುದ್ಧ 7-5, 6-3 ಸೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿದ ಜೊಕೊವಿಕ್ ಬಳಿಕ ಸಂಭ್ರಮಿಸಿದ್ದಾರೆ.

ಕ್ಯಾಸ್ಪರ್ ರೂಡ್ ಮಣಿಸಿ ಫೈನಲ್ ಪ್ರವೇಶಿಸಿದ ಜೊಕೊವಿಕ್

ಜೊಕೊವಿಕ್ ಅವರಲ್ಲಿ ಇತ್ತೀಚಿಗೆ ಶಿಸ್ತಿನ ತೊಂದರೆಗಳು ಮುಂದುವರೆದಿದ್ದು, ಪಂದ್ಯದ ಮಧ್ಯೆ ಅಶಿಸ್ತಿನ ಬಗ್ಗೆ ಎಚ್ಚರಿಕೆ ನೀಡಲಾಯಿತು. "ನಾನು ಇನ್ನೂ ಪ್ರಶಸ್ತಿಯ ಬಗ್ಗೆ ಹಸಿವನ್ನು ಹೊಂದಿದ್ದೇನೆ ಮತ್ತು ಪ್ರಶಸ್ತಿಗಾಗಿ ಹೋರಾಡಲು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅರ್ಜೆಂಟೈನಾದ ಆಟಗಾರ ಡಿಯಾಗೋ ಶ್ವಾರ್ಟ್‌ಜ್‌ಮನ್ ಅವರನ್ನು ಎದುರಿಸಲಿದ್ದಾರೆ.

ABOUT THE AUTHOR

...view details